ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಅನ್ನಿಸಿಕೊಂಡವರಿಗೆ ಧೀಮಂತ ಪ್ರಶಸ್ತಿ.

Share to all

!!!ಎನಗಿಂತ ಕಿರಿಯರಿಲ್ಲ.ಶಿವಭಕ್ತರಿಗಿಂತ ಹಿರಿಯರಿಲ್ಲಾ.ನಿಮ್ಮ ಪಾದ ಸಾಕ್ಷಿ ಎನ್ನ ಮನ ಸಾಕ್ಷಿ ಎನ್ನುವ ಮಂಜುನಾಥನಿಗೆ ಧೀಮಂತ ಪ್ರಶಶ್ತಿ!!!

ಹುಬ್ಬಳ್ಳಿ:-ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯು ರಾಜ್ಯೋತ್ಸವದ ಅಂಗವಾಗಿ ಕೊಡಮಾಡುವ ಧೀಮಂತ ಪ್ರಶಸ್ತಿಗೆ ಕನ್ನಡ ಪರ ಸಂಘಟೆನೆಗಳ ವಿಭಾಗದಲ್ಲಿ ಮಂಜುನಾಥ. ಲೂತಿಮಠ ಅವರನ್ನು ಆಯ್ಕೆ ಮಾಡುವ ಮೂಲಕ ಪ್ರಶಸ್ತಿಯ ಗೌರವವನ್ನು ಹೆಚ್ಚಿಸಲಾಗಿದೆ.

ಹುಬ್ಬಳ್ಳಿಯಲ್ಲಿ ಜನಿಸಿದ 42 ವರ್ಷದ ಹುಟ್ಟು ಹೋರಾಟಗಾರ ಮಂಜುನಾಥ ಲೂತಿಮಠ ಕಾಲೇಜು ದಿನಗಳಲ್ಲಿಯೇ ಹೋರಾಟವನ್ನು ಮೈಗೂಡಿಸಿಕೊಂಡು ಬೆಳೆದವರು.ಮೊದಲಿನಿಂದಲೂ ಕಷ್ಟ,ಸುಖಗಳಲ್ಲಿ ಸಮಬಾಳು ಸಮಪಾಲು ಎಂಬ ಧ್ಯೇಯದೊಂದಿಗೆ ಬೆಳೆದಿರುವ ಮಂಜುನಾಥ ಅವರು ಕಳೆದ ಇಪ್ಪತ್ತೂ ವರ್ಷಗಳಿಂದ ನಾಡು,ನುಡಿ,ಜಲ ವಿಷಯ ಬಂದರೆ ಹೋರಾಟದಲ್ಲಿ ಮಂಚೂಣಿಯಲ್ಲಿರವ ಅವರು ಕಳಸಾ-ಬಂಡೂರಿ ಸೇರಿದಂತೆ ಹಲವು ಹೋರಾಟಗಳಲ್ಲಿ ಭಾಗಿಯಾಗಿ ಹಗಲು-ರಾತ್ರಿ ಹೋರಾಟ ಮಾಡಿದವರು ಮಂಜುನಾಥ. ಲೂತಿಮಠ.

ಹುಬ್ಬಳ್ಳಿಯಲ್ಲಿ ನಾಡು,ನುಡಿ,ಜಲ ವಿಷಯ ಬಂದಾಗ ಮೊದಲು ಚೆನ್ನಮ್ಮ ವ್ರತ್ತದಲ್ಲಿ ಸೂರ್ಯೋದಯಕ್ಕೂ ಮೊದಲೇ ಧ್ವಜ ಹಿಡಿದು ಹೋರಾಟಕ್ಕೆ ಕಿಚ್ಚು ಹಚ್ಚುವುದರಲ್ಲಿ ಮೊದಲಿಗರು.

ಅಷ್ಟೇ ಅಲ್ಲಾ ಅವರಿಗೆ ಬಡವರ ಬಗ್ಗೆ ಎಲ್ಲಿಲ್ಲದ ಕಾಳಜಿ.ಅಜ್ಜರ ಅಂತಾ ಬಂದರೆ ಆಯ್ತು ಅವರಿಗೆ ಶಾಲೆ,ಕಾಲೇಜು ಫೀಜ್ ಇರಬಹುದು ಇನ್ನಿತರೇ ಏನೇ ಇದ್ದರೂ ಆಯ್ತು ಬಿಡಿ ಅದನ್ನ ನಾನು ಕೊಡತೇನಿ ಅನ್ನುವ ಉದಾರ ಭಾವನೆಯ ವ್ಯಕ್ತಿ ಅವರು.ಅಲ್ಲದೇ ಮಾದ್ಯಮ ಬಂಧುಗಳು ಎಲ್ಲೇ ಕಂಡರೂ ಊಟಾ ಮಾಡೋಣ್ರೀ,ಚಹಾ ಕುಡಿಯೋಣ್ರೀ ಅನ್ನೋ ವ್ಯಕ್ತಿ ಇವರು.

ಇನ್ನೂ ರಾಜಕೀಯ ಅಂತಾ ಬಂದರೆ ನೋಡ್ರೀ ನಮಗ ಯಾರು ಅಭಿವ್ರದ್ದಿ ಕೆಲಸ ಮಾಡತಾರ ಅವರನ್ನ ಬೆಂಬಲಿಸೋಣ ಅಂತಾ ಹೇಳುವ ವ್ಯಕ್ತಿತ್ವ ಉಳ್ಳವರು.

ಅಲ್ಲದೇ ಅಕ್ರಮ ಮತ್ತು ಬ್ರಷ್ಟಾಚಾರ ಅಂತಾ ಬಂದರೆ ಅಲ್ಲಿಗೆ ಹೋಗಿ ಪ್ರತಿಭಟನೆಗೆ ಕುಳಿತು ಬಿಡುವ ಸ್ವಭಾವದವರು ಅದು ಒಂದು ಅಂತ್ಯ ಕಾಣುವವರೆಗೂ ಹೋರಾಟದಿಂದ ಹಿಂದೆ ಸರಿಯದ ಆಸಾಮಿ ಇವರು.ಇವರ ಇಂತಹ ಹೋರಾಟಗಳಿಗೆ ಹೆದರದ ಕಾರಣ ಕೆಲವು ದುಷ್ಟಶಕ್ತಿಗಳು ಅವರ ಬಗ್ಗೆ ಇಲ್ಲ ಸಲ್ಲದ ಆರೋಪಗಳನ್ನು ಮಾಡಿದ್ದೂ ಉಂಟು.

ಇನ್ನು ಇಂದು ಧೀಮಂತ ಪ್ರಶಸ್ತ ಬಂದ ಬಗ್ಗೆ ಅವನ್ನು ಮಾತನಾಡಿಸಲು ಪ್ರಯತ್ನಿಸಿದಾಗ ಅವರು ಹೇಳಿದ್ದು ಹೀಗೆ ನೋಡ್ರೀ ಇಂದು ಪ್ರಶಸ್ತಿಗಾಗಿ ಲಾಬಿ ಮಾಡುವ ಕಾಲದಲ್ಲಿ ನನಗೆ ಪ್ರಶಸ್ತಿ ಹುಡುಕಿಕೊಂಡು ಬಂದಿರುವುದು ನನಗಲ್ಲ ಅದು. ನನ್ನ ಜೊತೆಗಿರುವ ನನ್ನ ಸಂಘಟನೆಯ ಸದಸ್ಯರಿಗೆ ಪ್ರಶಸ್ತಿ ಬಂದಿದೆ ಎಂದು ಹೇಳುತ್ತಾರೆ.

ಒಟ್ಟಾರೆ ಇಂದು ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎನ್ನುವ ರೀತಿ ಇರುವ ಮಂಜುನಾಥ ಲೂತಿಮಠಗೆ ದೀಮಂತ ಪ್ರಶಸ್ತಿ ಮುಡಿಗೇರಿದೆ.ಇನ್ನೂ ಹೆಚ್ಚು ಹೆಚ್ಚು ಪ್ರಶಸ್ತಿಗಳು ಲಭಿಸಲಿ ಎಂದು ಉದಯ ವಾರ್ತೆ ಯ ಹಾರೈಕೆ ಅಷ್ಟೇ….

ಉದಯ ವಾರ್ತೆ ಹುಬ್ಬಳ್ಳಿ


Share to all

You May Also Like

More From Author