ಸಿದ್ದರಾಮಯ್ಯನವರೇ ಕರ್ನಾಟಕವನ್ನು ಪಾಕಿಸ್ತಾನ ಮಾಡಲು ಹೊರಟಿದ್ದೀರಾ?: ತೇಜಸ್ವಿ ಸೂರ್ಯ ಪ್ರಶ್ನೆ!

Share to all

ಬೆಂಗಳೂರು:- ಸಿದ್ದರಾಮಯ್ಯನವರೇ ಕರ್ನಾಟಕವನ್ನು ಪಾಕಿಸ್ತಾನ ಮಾಡಲು ಹೊರಟಿದ್ದೀರಾ? ಎಂದು ಬಿಜೆಪಿ ಮುಖಂಡ ಹಾಗೂ ಸಂಸದ ತೇಜಸ್ವಿ ಸೂರ್ಯ ಪ್ರಶ್ನೆ ಮಾಡಿದ್ದಾರೆ. ಈ ಸಂಬಂಧ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿರುವ ಅವರು, ವಿಜಯಪುರ ಜಿಲ್ಲೆಯಲ್ಲಿ ವಕ್ಫ್ ನೋಂದಣಿ ಕುರಿತಾಗಿ ಎದ್ದಿರುವ ಗೊಂದಲಗಳ ಕುರಿತಾಗಿ ಅಲ್ಲಿನ ರೈತರು ಮತ್ತು ನೋಟಿಸ್ ಪಡೆದಿರುವ ಸಾರ್ವಜನಿಕರು ಇಂದು ನಿಯೋಗದೊಂದಿಗೆ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಅವರನ್ನು ಭೇಟಿ ಮಾಡಿ, ಚರ್ಚೆ ನಡೆಸಿದರು.

ಬಳಿಕ ಸಂಸದ ತೇಜಸ್ವಿ ಸೂರ್ಯ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಬಹಳಷ್ಟು ಜನರಿಗೆ ಕೇಂದ್ರ ಸರ್ಕಾರ ಯಾಕೆ ವಕ್ಫ್ ಕಾಯ್ದೆಗೆ ತಿದ್ದುಪಡಿ ತರುತ್ತಿದೆ ಅಂತ ಗೊತ್ತಿಲ್ಲ. ಸಚಿವ ಜಮೀರ್ ಅಹಮದ್ ಕೆಲವು ದಿನಗಳ ಹಿಂದೆ ಕೆಲವು ಜಿಲ್ಲೆಗಳಿಗೆ ಭೇಟಿ ನೀಡಿ, ವಕ್ಫ್ ಬೋರ್ಡ್ ಯಾವ ಆಸ್ತಿಗಳು ತನ್ನದು ಅಂತ ಹೇಳುತ್ತದೆ ಅದನ್ನು 15 ದಿನಗಳಲ್ಲಿ ನೋಂದಣಿ ಮಾಡಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿ ಬಂದಿದ್ದಾರೆ.

ಸಚಿವರು ಹೇಳಿದರು ಅಂತ ಜಿಲ್ಲಾಧಿಕಾರಿಗಳಯ ರಾತ್ರೋ ರಾತ್ರಿ ಪಹಣಿಯಲ್ಲಿ ಹೆಸರು ಬದಲಿಸಲು ಹೊರಟಿದ್ದಾರೆ. ವಿಜಯಪುರ ಜಿಲ್ಲೆಯಲ್ಲಿ ಸುಮಾರು 15 ಸಾವಿರ ಎಕರೆಯನ್ನು ವಕ್ಫ್ ಬೋರ್ಡ್ ತನ್ನದು ಅಂತ ಹೇಳುತ್ತಿದೆ ಎಂದು ತಿಳಿಸಿದರು.

ಹಿಂದೂಗಳಿಗೆ ಅಪಮಾನ ಮಾಡಿ ಮುಸ್ಲಮರಿಗಷ್ಟೇ ಜಮೀನು ಕೊಡಲು ಹೊರಟಿದ್ದೀರಾ? ಪಹಣಿಯಲ್ಲಿ ಯಾಕೆ ವಕ್ಪ್ ಬೋರ್ಡ್ ಕರ್ನಾಟಕ ಸರ್ಕಾರ ಅಂತ ಹಾಕುತ್ತಿದ್ದೀರಿ? ತಹಸೀಲ್ದಾರ್​ಗಳು, ಜಿಲ್ಲಾಧಿಕಾರಿಗಳು ಸರ್ಕಾರ ನಡೆಸಬೇಕಾಗಿರುವುದು ಸಂವಿಧಾನದ ಮೇಲೆ ಹೊರತು ಷರಿಯಾ ಕಾನೂನಿನ ಮೇಲೆ ಅಲ್ಲ. ಜಮೀರ್ ಅಹಮದ್ ಹೇಳಿದರು, ಮಸೀದಿಯ ಮುಲ್ಲಾ ಹೇಳಿದರು ಅಂತ ಕೆಲಸ ಮಾಡುವುದು ಅಲ್ಲ. ಇದು ಮುಂದುವರಿದರೆ ಹೈಕೋರ್ಟ್ ಮತ್ತು ಲೋಕಾಯುಕ್ತಕ್ಕೆ ಹೋಗಿ ನಿಮ್ಮನ್ನು ಅಮನಾತು ಮಾಡಲು ಆದೇಶ ತರುವಲ್ಲಿ ನಾನು ಹಿಂಜರಿಯುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ವಕ್ಫ್ ಕಾನೂನು ಬರುವ ಮುನ್ನ ಎಷ್ಟು ಸಾಧ್ಯವಾಗುತ್ತೋ ಅಷ್ಟು ಜಮೀನು ಕಬಳಿಸಿಕೊಳ್ಳಬೇಕು ಅಂತ ಹುನ್ನಾರ ಮಾಡುತ್ತಿದ್ದಾರೆ. ರಾಜ್ಯದ ಯಾವುದೇ ಭಾಗದಲ್ಲಿ ವಕ್ಫ್ ಸಮಸ್ಯೆ ಇದ್ದರೂ ನನ್ನ ಕಚೇರಿಗೆ ಬನ್ನಿ. ಹೈಕೋರ್ಟ್​ಗೆ ಹೋಗಿ ನಿಮಗೆ ನ್ಯಾಯ ಕೊಡಿಸುತ್ತೇನೆ. ಇದು ಭಾರತ, ಇದು ಪಾಕಿಸ್ತಾನದ ಕಾನೂನಿನಂತೆ ನಡೆಯುವ ರಾಜ್ಯ ಅಲ್ಲ. ವಕ್ಫ್ ಹೆಸರಿನಲ್ಲಿ ಕಾಂಗ್ರೆಸ್ ಮುಸಲ್ಮಾನರಿಗೆ ಕೂಡ ಮೋಸ ಮಾಡಿದೆ. ವಕ್ಫ್ ಎಂದರೆ ಅಲ್ಲಾ ಅವರಿಗೆ ಕೊಟ್ಟ ಆಸ್ತಿ. ವಕ್ಫ್ ಬೋರ್ಡ್​ ಜಮೀನು ಅತಿಕ್ರಮಣ ಮಾಡಿಕೊಂಡಿದ್ದರೇ, ತನಿಖೆ ಮಾಡಿ ನೋಟೀಸ್ ಕೊಡಬಹುದು. ಬಳಿ, ನಮ್ಮದು ಜಮೀನು ಅಂತ ಸೆಕ್ಷನ್ 40 ಅಡಿಯಲ್ಲಿ ಕ್ಲೈಮ್ ಮಾಡಿಕೊಳ್ಳಬಹುದು. ಈ ತಿದ್ದುಪಡಿಯನ್ನು ಕಾಂಗ್ರೆಸ್ 1995 ರಲ್ಲಿ ತಂದಿತು ಎಂದು ತಿಳಿಸಿದ್ದಾರೆ.


Share to all

You May Also Like

More From Author