ಬೆಳಗಾವಿ:- ರಾಜ್ಯ ಸರ್ಕಾರದ ಶಕ್ತಿ ಯೋಜನೆ ಜಾರಿ ಆದಾಗಿನಿಂದ ಒಂದಲ್ಲ ಒಂದು ರೀತಿ ಸಮಸ್ಯೆ ಬರುತ್ತಿದೆ. ಇದು ಪ್ರಯಾಣಿಕರು ಸೇರಿ ಬಸ್ ಚಾಲಕ, ನಿರ್ವಾಹಕರಿಗೂ ಕಿರಿ ಕಿರಿ ಉಂಟು ಮಾಡಿದೆ. ಅದರಂತೆ ಬೆಳಗಾವಿ ಜಿಲ್ಲೆಯಲ್ಲಿ ಸರ್ಕಾರಿ ಬಸ್ಸಿನಲ್ಲಿ ಸೀಟ್ ವಿಚಾರಕ್ಕೆ ಮಹಿಳೆಯರು ಚಪ್ಪಲಿಯಲ್ಲಿ ಹೊಡೆದಾಡಿದ ಘಟನೆ ಜರುಗಿದೆ.
ಸವದತ್ತಿ ರೇಣುಕಾ ಯಲ್ಲಮ್ಮದೇವಿ ದರ್ಶನ ಪಡೆಯಲು ಸವದತ್ತಿಗೆ ಹೋಗುವ ಬಸ್ಸನ್ನು ಮಹಿಳೆಯರು ಹತ್ತಿದ್ದಾರೆ. ಈ ವೇಳೆ ಸೀಟ್ ನನ್ನದು ನನ್ನದು ಅಂತಾ ಮಹಿಳೆಯರ ಮಧ್ಯೆ ಜಗಳ ಆರಂಭವಾಗಿದೆ. ಮೊದಲಿಗೆ ಮಹಿಳೆಯರು ಪರಸ್ಪರ ಬೈದಾಡಿಕೊಂಡಿದ್ದಾರೆ. ನಂತರ ಕೈಕೈ ಮಿಲಾಯಿಸಿ ಚಪ್ಪಲಿಯಲ್ಲಿ ಹೊಡೆದಾಡಿದ್ದಾರೆ. ಈ ವೇಳೆ ವೇಳೆ ಅಡ್ಡ ಬಂದ ಬಾಲಕಿಗೂ ಚಪ್ಪಲಿಯಿಂದ ಮಹಿಳೆ ಹೊಡೆದಿದ್ದಾಳೆ.