ಹುಬ್ಬಳ್ಳಿ
ಹುಬ್ಬಳ್ಳಿಯಲ್ಲಿ ಸಿಸಿಬಿ ಪೋಲೀಸರು ಕಾರ್ಯಾಚರಣೆ ನಡೆಸಿ ಕ್ರಿಕೆಟ್ ಬೆಟ್ಟಿಂಗ್ ದಂಧೆಯಲ್ಲಿ ತೊಡಗಿದ್ದ ಮೂವರನ್ನು ಬಂಧಿಸಿದ್ದಾರೆ.
ಕಮರೀಪೇಟೆ ಪೋಲೀಸ ಠಾಣಾ ವ್ಯಾಪ್ತಿಯ ತೊರವಿ ಹಕ್ಕಲದ ಬಳಿ ದಕ್ಷಿಣ ಆಪ್ರೀಕಾ ಮತ್ತು ನ್ಯೂಜಿಲೆಂಡ್ ದೇಶಗಳ ನಡುವೆ ನಡೆಯುತ್ತಿರುವ ಪಂದ್ಯದ ವೇಳೆ ಬೆಟ್ಟಿಂಗ್ ದಂಧೆಯಲ್ಲಿ ತೊಡಗಿದ್ದವರ ಮೇಲೆ ದಾಳಿ ಮಾಡಿ ಬಂಧಿತರಿಂದ ಮೂರು ಮೋಬೈಲ್ 61 ಸಾವಿರ ನಗದು ವಶಪಡಿಸಿಕೊಂಡು ದೂರು ದಾಖಲಿಸಿದ್ದಾರೆ.
ಕ್ರಕಿಟ್ ಬೆಟ್ಟಿಂಗ್ ಮಟ್ಟ ಹಾಕುವಲ್ಲಿ ಸಿಸಿಬಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಕಾರ್ಯಕ್ಕೆ ಪೋಲೀಸ ಆಯುಕ್ತರಾದ ರೇಣುಕಾ ಸುಕುಮಾರ ಶ್ಲಾಘಿಸಿದ್ದಾರೆ.
ಉದಯ ವಾರ್ತೆ ಹುಬ್ಬಳ್ಳಿ