ಹಾಸನಾಂಬೆ ದರ್ಶನಕ್ಕೆ ಇಂದೇ ಲಾಸ್ಟ್ ಡೇ: ಈ ಬಾರಿಗೆ ದೇವಿಗೆ ಹರಿದು ಬಂದ ಆದಾಯ ಎಷ್ಟು!?

Share to all

ಹಾಸನ:- ಹಾಸನ ಹಾಸನಾಂಬೆ ದರ್ಶನಕ್ಕೆ ಇಂದೇ ಲಾಸ್ಟ್ ಡೇ ಆಗಿದ್ದು, ಇದುವರೆಗೆ 16 ಲಕ್ಷ ಭಕ್ತರ ಆಗಮಿಸಿದ್ದಾರೆ. ಈ ಮೂಲಕ ಒಂಭತ್ತು ದಿನದಲ್ಲಿ 8 ಕೋಟಿ ರೂ ಆದಾಯ ಹರಿದು ಬಂದಿದೆ.

ಈ ಬಗ್ಗೆ ಹಾಸನಾಂಬೆ ದೇವಾಲಯದ ಆಡಳಿತ ಅಧಿಕಾರಿ ಮಾರುತಿ ಅವರು ಮಾತನಾಡಿದ್ದು, ಇದುವರೆಗೆ 16 ಲಕ್ಷ ಭಕ್ತರು ಭೇಟಿ ನೀಡಿದ್ದು, ಟಿಕೆಟ್, ಲಡ್ಡು ಪ್ರಸಾದ ಮಾರಾಟದಿಂದ 8 ಕೋಟಿ ರೂ. ಆದಾಯ ಬಂದಿದೆ ಎಂದಿದ್ದಾರೆ.

ಈ ವರ್ಷ ಜಿಲ್ಲಾಡಳಿತ ಕೈಗೊಂಡ ಕ್ರಮಗಳಿಂದ ಭಕ್ತರ ಸಂಖ್ಯೆ ಹೆಚ್ಚಾಗಿದೆ. ಪಾಸ್​ಗಳನ್ನು ರದ್ದು ಮಾಡಿದ್ರೂ ಕೂಡ ಭಕ್ತರ ಸಂಖ್ಯೆ ಕಡಿಮೆ ಆಗಿಲ್ಲ. ನಿರೀಕ್ಷೆಗೂ ಮೀರಿ ದೇಶ-ವಿದೇಶದಿಂದಲೂ ಭಕ್ತರು ಬಂದಿದ್ದಾರೆ ಎಂದರು.

ಇಂದು 5 ಗಂಟೆವರೆಗೆ ಹಾಸನಾಂಬೆ ದರ್ಶನ ಇರಲಿದೆ. ನಂತರ ಶ್ರೀ ಸಿದ್ದೇಶ್ವರ ಸ್ವಾಮಿ ರಥೋತ್ಸವ ಆರಂಭ ಆಗಲಿದೆ. ನಂತರ ರಾತ್ರಿ 11 ರಿಂದ ಮತ್ತೆ ಹಾಸನಾಂಬೆ ದರ್ಶನ ಆರಂಭವಾಗಲಿದೆ.

ನಾಳೆ ಬೆಳಿಗ್ಗೆ 6 ಗಂಟೆವರೆಗೆ ದರ್ಶನ ಇರಲಿದ್ದು, ನಂತರ ಭಕ್ತರಿಗೆ ದರ್ಶನಕ್ಕೆ ಅವಕಾಶ ಇಲ್ಲ. ನಾಳೆ 12 ಗಂಟೆಗೆ ಗರ್ಭಗುಡಿ ಬಾಗಿಲು ಮುಚ್ಚಲಿದೆ  ಎಂದಿದ್ದಾರೆ.


Share to all

You May Also Like

More From Author