ಕಾಂಗ್ರೇಸ್ ಪಕ್ಷದ ಶಾಸಕ ಬಂಧನ – ನಿವಾಸದಲ್ಲಿಯೇ ಶಾಸಕನನ್ನು ಬಂಧನ ಮಾಡಿದ ಪೊಲೀಸರು ಬಂಧನಕ್ಕೆ ಕಾರಣ ಏನು ಗೊತ್ತಾ…..

Share to all

ಕಾಂಗ್ರೇಸ್ ಪಕ್ಷದ ಶಾಸಕ ಬಂಧನ – ನಿವಾಸದಲ್ಲಿಯೇ ಶಾಸಕನನ್ನು ಬಂಧನ ಮಾಡಿದ ಪೊಲೀಸರು ಬಂಧನಕ್ಕೆ ಕಾರಣ ಏನು ಗೊತ್ತಾ…..

ಗುವಾಹಟಿ –

ಹೌದು ಹಿಂದೂ ಸಮುದಾಯ ಮತ್ತು ಪುರೋಹಿತರ ವಿರುದ್ಧ ಹಗುರವಾಗಿ ಮಾತನಾಡಿದ ಆರೋಪದ ಮೇಲೆ ಕಾಂಗ್ರೇಸ್ ಪಕ್ಷದ ಶಾಸಕರೊಬ್ಬರನ್ನು ಬಂಧನ ಮಾಡಿದ ಘಟನೆ ಗುವಾಹಟಿಯಲ್ಲಿ ನಡೆದಿದೆ.ಅಫ್ತಾಬ್ ಉದ್ದೀನ್ ಮೊಲ್ಲಾ ಬಂಧಿತವಾಗಿರುವ ಕಾಂಗ್ರೇಸ್ ಪಕ್ಷದ ಶಾಸಕರಾಗಿದ್ದು ಅತ್ತ ಈ ಕುರಿತಂತೆ ದೂರು ದಾಖಲಾಗುತ್ತಿದ್ದಂತೆ ಇತ್ತ ಪೊಲೀಸರು ಇವರನ್ನು ಬಂಧನ ಮಾಡಿದ್ದಾರೆ.ಗುವಾಹಟಿಯಲ್ಲಿ ಶಾಸಕರನ್ನು ನಿವಾಸದಲ್ಲಿಯೇ ಬಂಧನ ಮಾಡಿರುವ ಪೊಲೀಸರು ವಶಕ್ಕೆ ತಗೆದುಕೊಂಡು ತನಿಖೆಯನ್ನು ಮಾಡ್ತಾ ಇದ್ದಾರೆ.ಇನ್ನೂ ಇತ್ತ ನವೆಂಬರ್ 5 ರಂದು ಅಸ್ಸಾಂ ಪ್ರದೇಶ ಕಾಂಗ್ರೆಸ್ ಸಮಿತಿಯು ಮೊಲ್ಲಾಗೆ ಶೋಕಾಸ್ ನೋಟಿಸ್ ನೀಡಲಾಗಿದೆ.ಹಿಂದೂ ಇರುವಲ್ಲಿ ಅಲ್ಲಿ ತಪ್ಪುಗಳಿವೆ ಮಂದಿರದ ಅರ್ಚಕ ಮತ್ತು ನಾಮಘರ್‌ನ ಉಸ್ತುವಾರಿಗಳು ಅತ್ಯಾಚಾರಿಗಳು ಎಂದು ಹೇಳಿಕೆ ನೀಡಿದ್ದರು.ನವೆಂಬರ್ 4 ರಂದು ಗೋಲ್ಪಾರಾ ಜಿಲ್ಲೆಯಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಈ ಒಂದು ಹೇಳಿಕೆಯನ್ನು ಕಾಂಗ್ರೇಸ್ ಪಕ್ಷದ ಶಾಸಕರು ನೀಡಿದ್ದರು. ಭಾರತೀಯ ದಂಡ ಸಂಹಿತೆ ಅಡಿಯಲ್ಲಿ ಸೆಕ್ಷನ್ 295(a)/ 153A(1)(b)/505(2) ಅಡಿಯಲ್ಲಿ ದಿಸ್ಪುರ್ ಪೊಲೀಸ್ ಠಾಣೆಯಲ್ಲಿ ಈ ಕುರಿತಂತೆ ಪ್ರಕರಣ ದಾಖಲಾಗಿದ್ದು ಸಧ್ಯ ಪ್ರಕರಣವನ್ನು ದಾಖಲು ಮಾಡಿಕೊಂಡಿರುವ ಪೊಲೀಸರು ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.

ಉದಯ ವಾರ್ತೆ ಗುಹಾತಿ


Share to all

You May Also Like

More From Author