ಹುಬ್ಬಳ್ಳಿ
ಆಪರೇಶನ್ ಹಸ್ತದಲ್ಲಿಯೇ ಆಪರೇಶನ ಹಸ್ತ ಮಾಡೋ ಟೀಮ್ ರೆಡಿಯಾಗಿದೆ ಎಂದು ಶಾಸಕ ಮಹೇಶ.ಟೆಂಗಿನಕಾಯಿ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು
ಕಾಂಗ್ರೆಸ್ ಈ ಟೀಮ್ ರೆಡಿ ಮಾಡಿಕೊಂಡಿದೆ.ಕಾಂಗ್ರೆಸ್ ನಲ್ಲಿ ಮೊದಲು ಎರಡು ಬಾಗಿಲಿತ್ತು.
ಇದೀಗ ನಾಲ್ಕು ಬಾಗಿಲಾಗಿವೆ.
ಇದರಲ್ಲಿ ಬಿಜೆಪಿ ಇನ್ವಾಲ್ ಮೆಂಟ್ ಇಲ್ಲ.ಕಾಂಗ್ರೆಸ್ ನಲ್ಲಿ ಬಣ ರಾಜಕೀಯ ಎದ್ದು ಕಾಣುತ್ತಿದೆ.
ದುರ್ದೈವ ಅಂದ್ರೆ ಕಾಂಗ್ರೆಸ್ ನ ಎಚ್ ಕೆ ಪಾಟೀಲ್ ಅವರನ್ನ ಯಾವ ಮನೆಗೆ ಊಟಕ್ಕೂ ಕರೆದಿಲ್ಲ,ಟಿಫಿನ್ ಮಾಡೋಕು ಕರೆದಿಲ್ಲ.
ಸಿದ್ದರಾಮಯ್ಯ ಕರಿಲಿಲ್ಲ,ಡಿಕೆ ಶಿವಕುಮಾರ್ ಕರೆದಿಲ್ಲ.
ಸಿದ್ದರಾಮಯ್ಯ,ಡಿಕೆ ಶಿವಕುಮಾರ್ ಪರಮೇಶ್ವರ ಬಣಗಳಾಗಿವೆ.ಇತ್ತ ನಾನು ಮುಖ್ಯಮಂತ್ರಿ ಆಗಬೇಕು ಎಂದು ಸತೀಶ್ ಜಾರಕಿಹೊಳಿ ಓಡಾಡ್ತೀದಾರೆ.
ಕಾಂಗ್ರೆಸ್ ನಲ್ಲಿ ಮುಖ್ಯಮಂತ್ರಿ ಗಾದೆ ಬಗ್ಗೆ ಬಹಳ ಚರ್ಚೆ ನಡೀತಿದೆ.ನಾವೇನು ಮಾಡಲ್ಲ,ಫೆಬ್ರವರಿ ಮಾರ್ಚ ವರೆಗೂ ನೋಡಿ ಏನೇನಾಗತ್ತೆ ಎಂದ ಟೆಂಗಿನಕಾಯಿ.
ಯಾವದೇ ಆಪರೇಶನ್ ಕಮಲ ಬಿಜೆಪಿ ಮಾಡಲ್ಲ.ಬಿಜೆಪಿಯ ಯಾವೊಬ್ಬ ಶಾಸಕರು ಕಾಂಗ್ರೆಸ್ ಗೆ ಹೋಗಲ್ಲ.
ರಾಜ್ಯದಲ್ಲಿ ಮತಾಂತರ ವಿಚಾರ.
ಮುಖ್ಯಮಂತ್ರಿಗಳ ಸಮುದಾಯದ ಜನ ಇವತ್ತು ಮತಾಂತರ ಆಗಿದ್ದಾರೆ.
ಹಾಗಾದ್ರೆ ಮುಖ್ಯಮಂತ್ರಿಗಳೇ ಮತಾಂತರಕ್ಕೆ ಪ್ರೋತ್ಸಾಹ ಮಾಡ್ತೀರಾ ವಿರೋಧ ಮಾಡ್ತೀರಾ ಅನ್ನೋದನ್ನ ಮುಖ್ಯಮಂತ್ರಿ ಹೇಳಬೇಕು.
ಇದೇ ಕಾರಣಕ್ಕೆ ಮತಾಂತರ ಕಾಯ್ದೆ ಜಾರಿ ಮಾಡಿದ್ದು.
ಸಮುದಾಯದ ಜನ ಸಿದ್ದರಾಮಯ್ಯ ಉಳಿಸಿಕೋತಾರೋ ಬಿಟ್ಟಕೊಡತಾರೋ ನೋಡೋಣ ಎಂದ ಮಹೇಶ ಟೆಂಗಿನಕಾಯಿ..
ಉದಯ ವಾರ್ತೆ ಹುಬ್ಬಳ್ಳಿ