ಧಾರವಾಡದಲ್ಲಿ ಬೀದಿಗೆ ಇಳಿದ ಕಬ್ಬು ಬೆಳೆಗಾರರು. ಕೂಡಿಹಳ್ಳಿ ಚಂದ್ರಶೇಖರ ನೇತೃತ್ವದಲ್ಲಿ ರೈತರ ಆಕ್ರೋಶ.

Share to all

ಧಾರವಾಡದಲ್ಲಿ ಬೀದಿಗೆ ಇಳಿದ ಕಬ್ಬು ಬೆಳೆಗಾರರು.
ಕೂಡಿಹಳ್ಳಿ ಚಂದ್ರಶೇಖರ ನೇತೃತ್ವದಲ್ಲಿ ರೈತರ ಆಕ್ರೋಶ.

ಧಾರವಾಡ:-ಪ್ರತಿ ಟನ್ ಕಬ್ಬಿಗೆ 4 ಸಾವಿರ ರೂಪಾಯಿ ಬೆಲೆ ನಿಗದಿ ಹಾಗೂ ಕಬ್ಬು ಬೆಳೆ ವಿಮೆ ಜಾರಿಗೆ ಅಗ್ರಹಿಸಿ, ಧಾರವಾಡದಲ್ಲಿ ಕಬ್ಬು ಬೆಳೆಗಾರರ ರೈತರು ಕೂಡಿಹಳ್ಳಿ
ನೇತೃತ್ವದಲ್ಲಿ ಬ್ರಹತ್ ಪ್ರತಿಭಟನೆ ಮೆರವಣಿಗೆ ನಡೆಸಿ ಆಕ್ರೋಶ ಹೊರ ಹಾಕಿದರು….

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಸಂಘಟನೆ ಹಾಗೂ ರೈತ ಹೋರಾಟಗಾರ ಕೂಡಿಹಳ್ಳಿ ಚಂದ್ರಶೇಖರ ಅವರ ನೇತೃತ್ವದಲ್ಲಿ, ನಗರದ ಮುರುಘಾಮಠದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಬೃಹತ್ ಪ್ರತಿಭಟನೆ ಮೆರವಣಿಗೆ ನಡೆಸಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದರು.

ರಾಜ್ಯದಲ್ಲಿ ಬರಗಾಲ ಬಿದಿದ್ದು, ರೈತರು ಬಿದಿಗೆ ಬರುವ ಸ್ಥಿತಿ ನಿರ್ಮಾಣವಾಗಿದೆ. ಆದರೆ ರಾಜ್ಯ ಕಾಂಗ್ರೆಸ್ ಸಚಿವರುಗಳು ಪಂಚ್ ರಾಜ್ಯಗಳ ಚುನಾವಣೆ ಪ್ರಚಾರದಲ್ಲಿ ಬ್ಯೂಸಿಯಾಗಿದ್ದಾರೆ. ಇಂತವರಿಗೆ ಅಧಿಕಾರ ಅಷ್ಟೇ ಮುಖ್ಯ ರಾಜ್ಯ ಜನತೆಯ ಕಷ್ಟಗಳಲ್ಲ.

ಕಬ್ಬು ಬೆಳೆಗಾರರು ಮಳೆ ಇಲ್ಲದೆ ಪರದಾಡುತ್ತಿದ್ದಾರೆ. ಪಂಪಸೆಟ್‌ಗಳಿಗೆ ಸರಿಯಾಗಿ ಸಮರ್ಪಕ ವಿದ್ಯುತ್‌ನ್ನು ಸರ್ಕಾರ ನೀಡುತ್ತಿಲ್ಲ. ಇದರಿಂದಾಗಿ ಹಲವು ಕಬ್ಬು ಬೆಳೆಗಾರರ ಬೆಳೆ ಕೈತಪ್ಪುವ ಭೀತಿಯನ್ನು ರೈತ ಎದುರಿಸುತ್ತಿದ್ದಾನೆ. ರೈತರ ವಿಚಾರದಲ್ಲಿ ರಾಜ್ಯ ಸರ್ಕಾರ ನುಎಇದಂತೆ ನಡೆದಿಲ್ಲ, ಕೇಂದ್ರ ಸರ್ಕಾರ ಹಾಗೇ ಮಾಡಿದೆ. ಹಾಗಾಗಿ ಈಗ ನಾವು ಎರಡು ಸರ್ಕಾರಗಳಿಗೆ ಎಚ್ಚರಿಕೆ ನೀಡುತ್ತಿದ್ದೇವೆ.

ಈ ಕೂಡಲೇ ರಾಜ್ಯ ಕೇಂದ್ರ ಸರ್ಕಾರಗಳು ಕಬ್ಬು ಬೆಳೆಗಾರರ ಸಂಕಷ್ಟಗಳಿಗೆ ಬೇಡಿಕೆಗಳಿಗೆ ಸ್ಪಂದನೆ ಮಾಡಬೇಕು, ಕಬ್ಬು ಬೆಳೆಯ 1 ಟನ್‌ಗೆ 4ಸಾವಿರ ಬೆಲೆ ನಿಗದಿ ಮಾಡಬೇಕು, ರೈತರ ಪಂಪಸೆಟ್.ಗಳಿಗೆ ಕನಿಷ್ಠ 12 ತಾಸು ವಿದ್ಯುತ್ ನೀಡಬೇಕು. ಜೊತೆಗೆ ರಾಜ್ಯ ಸರ್ಕಾರ ರೈತ ವಿರೋಧಿ ನೀತಿಗಳನ್ನು ಕೈಬೀಡಬೇಕು ಎಂದು ಆಗ್ರಹಿಸಿದರು.

ಉದಯ ವಾರ್ತೆ ಧಾರವಾಡ


Share to all

You May Also Like

More From Author