ಇನ್ನೊಮ್ಮೆ ಭೇಟಿ ನೀಡಿದಾಗ ವ್ಯವಸ್ಥೆ ಸರಿಯಾಗಿರಬೇಕು..ಹಾಸ್ಟೆಲ್ ವಾಡ್೯ನ್ನಗೆ ವಾರ್ನಿಂಗ್ ಕೊಟ್ಟ ಕಮೀಷನರ್ ಡಾ: ಈಶ್ವರ ಉಳ್ಳಾಗಡ್ಡಿ.
ಹುಬ್ಬಳ್ಳಿ:-ಮಹಾನಗರ ಪಾಲಿಕೆಯ ಕಮೀಷನರ್ ಕೆಲಸಕ್ಕೂ ಸೈ..ಹಾಸ್ಟೆಲ್ ನೋಡಲ್ ಅಧಿಕಾರಿ ಕೆಲಸಕ್ಕೂ ಸೈ..ದಿಡೀರ ಅಳ್ನಾವರ ಬಾಲಕಿಯರ ಹಾಸ್ಟೆಲ್ ಗೆ ಭೇಟಿ ಪರಿಶೀಲನೆ ನಡೆಸಿದ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಕಮೀಷನರ್ ಡಾ: ಈಶ್ವರ ಉಳ್ಳಾಗಡ್ಡಿ ಅವರು ಅಳ್ನಾವರ ಹಾಸ್ಟೆಲ್ ವ್ಯವಸ್ಥೆ ಪರಿಶೀಲನೆ ನಡೆಸಿ ಬಾಲಕಿಯರೊಂದಿಗೆ ಹಾಸ್ಟೆಲ್ ಊಟ ಸವಿದರು.
ಬಾಲಕಿಯರ ಸಮಸ್ಯೆಗಳನ್ನು ಕೇಳಿದ ಕಮೀಷನರ್ ಅವರ ಮೋಬೈಲ್ ನಂಬರ ಕೊಟ್ಟು ನಿಮಗೆ ತೊಂದರೆ ಆದರೆ ನನಗೆ ನೇರವಾಗಿ ಪೋನ್ ಮಾಡಿ ಎಂದು ಬಾಲಕಿಯರಿಗೆ ಆತ್ಮಸ್ಥೈರ್ಯ ತುಂಬಿದರು.
ಅಲ್ಲದೇ ಇನ್ನೊಮ್ಮೆ ನಾನು ಹಾಸ್ಟೆಲ್ ಗೆ ಭೇಟಿ ನೀಡುವುದರೊಳಗಾಗಿ ಹಾಸ್ಟೆಲ್ ವ್ಯವಸ್ಥೆ ಸರಿಯಾಗಿರಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ವಾರ್ನಿಂಗ್ ನೀಡಿದರು.