ಭಾರತೀಯ ಜನತಾ ಪಕ್ಷ, ಕರ್ನಾಟಕ ರಾಜ್ಯ ವತಿಯಿಂದ ಬರ ಅಧ್ಯಯನ ಪ್ರವಾಸ
ಇಂದು ರಾಯಚೂರು ಜಿಲ್ಲೆಯ ಸಿಂಧನೂರು,ಮಾನ್ವಿ ಮತ್ತು ರಾಯಚೂರು ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ಸಕಾಲಕ್ಕೆ ಮಳೆ ಇಲ್ಲದೆ ಬೆಳೆ ನಷ್ಟ ಹೊಂದಿದ ರೈತರ ಜಮೀನುಗಳಿಗೆ ಬರ ಅಧ್ಯಯನ ತಂಡದೊಂದಿಗೆ ಭೇಟಿ ನೀಡಿ ವೀಕ್ಷಣೆ ಮಾಡಿ ಮಾಹಿತಿ ಪಡೆದುಕೊಳ್ಳಲಾಯಿತು ಹಾಗೂ ಶೀಘ್ರ ಪರಿಹಾರಕ್ಕೆ ಸರ್ಕಾರವನ್ನು ಒತ್ತಾಯಿಸಲಾಯಿತು.
ಈ ಸಂದರ್ಭದಲ್ಲಿ ,
ಮಾಜಿ ಶಾಸಕರಾದ ಶ್ರೀ ಪ್ರತಾಪ್ ಗೌಡ ಪಾಟೀಲ್, ಮುಖಂಡರಾದ ಶ್ರೀ ಬಸನಗೌಡ ಬ್ಯಾಗವಾಟ್, ಶ್ರೀ ಕೆ ಕರಿಯಪ್ಪ, ರಾಯಚೂರು ಜಿಲ್ಲಾಧ್ಯಕ್ಷರಾದ ಶ್ರೀ ರಮಾನಂದ ಯಾದವ್ ಸೇರಿದಂತೆ ಮಂಡಲ ಅಧ್ಯಕ್ಷರು, ರೈತ ಮೋರ್ಚಾ ಪದಾಧಿಕಾರಿಗಳು, ಪಕ್ಷದ ಕಾರ್ಯಕರ್ತರು ಸೇರಿದಂತೆ ಅನೇಕ ರೈತರು, ಕೃಷಿಕರು ಉಪಸ್ಥಿತರಿದ್ದರು.
ಉದಯ ವಾರ್ತೆ ರಾಯಚೂರ