ಪತಿಯ ದೇಹ ಪೀಸ್..ಪೀಸ್..ಮಾಡಿದ ಪತ್ನಿ.. ಒಂಟಿಯಾಗಿ ರಾತ್ರೋ ರಾತ್ರಿ ಹೆಣ ಸಾಗಿಸಿದಳು ಗಟ್ಟಿಗಿತ್ತಿ..ಸಿನಿಮೀಯ ರೀತಿಯಲ್ಲಿ ಮಡ್೯ರ್…
ಬೆಳಗಾವಿ:-ಪತ್ನಿ ಸರಸಕ್ಕೆ ಕರೆದಾಗ ಬರಲಿಲ್ಲಾ ಅಂತಾ ಮಗಳ ಮೇಲೆ ಬಲತ್ಕಾರಕ್ಕೆ ಯತ್ನಿಸಿದ ಪತಿಯನ್ನೇ ಪೀಸ್..ಪೀಸ್ ಮಾಡಿದ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಗ್ರಾಮದ ಉಮರಾಣಿ ಗ್ರಾಮದಲ್ಲಿ ನಡೆದಿದೆ..
ಸಾವಿತ್ರಿ ಎಂಬ ಮೂವತ್ತು ವರ್ಷದ ಮಹಿಳೆ ತನ್ನ ಗಂಡ ಶ್ರೀಮಂತನನ್ನು ಮಲಗಿದಾಗ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ್ದಾಳೆ..ಮನೆಯಲ್ಲಿ ಮಕ್ಕಳು ಮಲಗಿದ ಮೇಲೆ ಯಾರಿಗೂ ಗೊತ್ತಾಗದಂತೆ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ ಗಟ್ಟಿಗಿತ್ತಿಯ ಸ್ಟೋರಿ ಕೇಳಿದರೇ ಗಾಬರಿಯಾಗತೀರಿ..
ಗಂಡನನ್ನು ಕೊಂದು ಮಕ್ಕಳು ಏಳುವುದರೊಳಗಾಗಿ ಗಂಡನ ಶವ ಪೀಸ್..ಪೀಸ್ ಮಾಡಿ ಬ್ಯಾರಲ್ ನಲ್ಲಿ ತುಂಬಿ ತಡ ರಾತ್ರಿ ಒಬ್ಬಳೇ ಶವವನ್ನು ಹೊರಸಾಗಿಸಿದ್ದಾಳೆ.ನಂತರ ಮನೆಗೆ ಬಂದುನೆಯಲ್ಲಿಯ ರಕ್ತ ಒರೆಸಿ,ರಕ್ತದ ಬಟ್ಟೆಯನ್ನು ಕಟ್ಟಿ ಬಾವಿಗೆ ಎಸೆದು ಬಂದು ಗಪ್ ಚುಪ್ ಆಗಿ ಮಕ್ಕಳ ಜೊತೆ ಮಲಗಿದ್ದಾಳೆ.
ಒಂದೆರಡು ದಿನಗಳ ನಂತರ ಜಮೀನಿನಲ್ಲಿ ಶವ ಸಿಗುತ್ತಿದ್ದಂತೆ ಪೋಲೀಸರು ಪತ್ನಿಯ ಮೇಲೆ ಅನುಮಾನ ಬಂದು ಎತ್ತಾಕೊಂಡು ಹೋಗಿ ವಿಚಾರಿಸಿದಾಗ ತನ್ನಿಂದ ತಪ್ಪಾಗಿದೆ ಕ್ಷಮಿಸಿ ಎಂದು ಕೊಲೆ ಮಾಡಿದ ರಹಸ್ಯ ಬಿಚ್ವಿಟ್ಟಿದ್ದಾಳೆ ಗಟ್ಟಿಗಿತ್ತಿ..