ನಾಳೆ ಹುಬ್ಬಳ್ಳಿ-ಧಾರವಾಡ ಬಂದ್ ಕರೆ ಹಿನ್ನೆಲೆ.. ಬಂದ್ ಗೆ ಸಹಕರಿಸುವಂತೆ ವ್ಯಾಪಾರಸ್ಥರಲ್ಲಿ ಮನವಿ ಮಾಡಿದ ಮುಖಂಡ ಮಾರುತಿ ದೊಡಮನಿ.
ಹುಬ್ಬಳ್ಳಿ:-ಡಾ:- ಬಾಬಾಸಾಹೇಬ ಅಂಬೇಡ್ಕರ್ ಅವರಿಗೆ ಅಮೀತ್ ಶಾ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆಂದು ಆರೋಪಿಸಿ ನಾಳೆ ಹುಬ್ಬಳ್ಳಿ-ಧಾರವಾಡ ಬಂದ್ ಕರೆ ನೀಡಿರುವ ವಿವಿಧ ದಲಿತ ಸಂಘಟನೆಗಳ ಒಕ್ಕೂಟ ಇಂದಿನಿಂದಲೇ ಜನರಲ್ಲಿ ಬಂದ್ ಗೆ ಸಹಕರಿಸುವಂತೆ ಮನವಿ ಮಾಡುತ್ತಿದ್ದಾರೆ.
ದಲಿತ ಮುಖಂಡ ಮಾರುತಿ ದೊಡಮನಿ ಹಾಗೂ ಸಂಗಡಿಗರು ಹುಬ್ಬಳ್ಳಿಯ ವಿವಿಧ ಮಾರುಕಟ್ಟೆಗಳಿಗೆ ಭೇಟಿ ನೀಡಿ ಗುಲಾಬಿ ಹೂ ನೀಡುವ ಮೂಲಕ ನಮ್ಮ ಬಂದ್ ಕರೆಗೆ ಬೆಂಬಲಿಸುವಂತೆ ಮನವಿ ಮಾಡಿದರು.
ಹುಬ್ಬಳ್ಳಿಯ ಬಟರ್ ಮಾರ್ಕೇಟ್,ದುರ್ಗದ ಬೈಲ್ ಸಿಬಿಟಿ,ಜನತಾ ಬಜಾರ ಸೇರಿದಂತೆ ವಿವಿಧ ಮಾರುಕಟ್ಟೆಗಳಿಗೆ ಭೇಟಿ ನೀಡಿದ ಮಾರುತಿ ದೊಡಮನಿ ಶಾಸಕ ಪ್ರಸಾದ ಅಬ್ಬಯ್ಯ ಅವರ ನೇತೃತ್ವದಲ್ಲಿ ನಾಳೆ ನಡೆಯಲಿರುವ ಬಂದ್ ಗೆ ಸಹಕರಿಸುವಂತೆ ಮನವಿ ಮಾಡಿದರು.