ಇಸ್ಪೀಟ್ ಅಡ್ಡೆ ಮೇಲೆ ಪೋಲೀಸರ ದಾಳಿ..16 ಜನರನ್ನು ಬಂಧಿಸಿದ ಗ್ರಾಮೀಣ ಪೋಲೀಸರು..
ಹುಬ್ಬಳ್ಳಿ:-ಜೂಜಾಟದ ಬೆನ್ನು ಬಿದ್ದಿರುವ ಹುಬ್ಬಳ್ಳಿ ಗ್ರಾಮೀಣ ಪೋಲೀಸ ಇನ್ಸ್ಪೆಕ್ಟರ್ ಮುರಗೇಶ ಚನ್ನಣ್ಣವರ ಟೀಂ ಕಳೆದ ಎರಡು ದಿನಗಳಿಂದ ನಾಲ್ಕು ಕಡೆ ಜೂಜಾಟ ಅಡ್ಡೆ ಮೇಲೆ ದಾಳಿ ನಡೆಸಿ 16 ಜನರನ್ನು ಬಂಧಿಸಿದ್ದಾರೆ..
ಹುಬ್ಬಳ್ಳಿ ತಾಲೂಕಿನ ನೂಲ್ವಿ,ಛಬ್ಬಿ,ಬುಡರಸಿಂಗಿ ಗ್ರಾಮಗಳ ಹೊರವಲಯದಲ್ಲಿ ಜೂಜಾಟ ನಡೆಸುತ್ತಿದ್ದ ಅಡ್ಡೆಗಳ ಮೇಲೆ ದಾಳಿ ನಡೆಸಿದ ಟೀಂ ದಂಧೆಕೋರರ ಹೆಡಮುರಿ ಕಟ್ಟಿದ್ದಾರೆ.ಅಲ್ಲದೇ ಜೂಜಾಟಕ್ಕೆ ಬಳಿಸಿದ್ದ ಸಾಮಗ್ರಿ 36700 ಹಣ ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.