ಹುಬ್ಬಳ್ಳಿಯಲ್ಲಿ ಕಳ್ಳ ಕಳ್ಳಿ ಗ್ಯಾಂಗ್..ಸ್ವಲ್ಪ ಯಾಮಾರಿದ್ರೆ ಸಾಕು ಗಲ್ಲಾ ಪಟ್ಟಿಗೆಯಲ್ಲಿದ್ದ ಹಣ ಮಾಯ..
ಹುಬ್ಬಳ್ಳಿ:- ಆ ಹುಡುಗ ಮತ್ತು ಹುಡುಗಿ ಬಟ್ಟೆ ಖರೀದಿ ನೆಪದಲ್ಲಿ ಅಂಗಡಿಗೆ ನುಗ್ಗಿದ್ದೇ ತಡ ಕಣ್ಣ ಸನ್ನೇ ಮೂಲಕ ಗಲ್ಲಾ ಪೆಟ್ಟಿಗೆಯಲ್ಲಿದ್ದ ಹಣ ಕದ್ದು ಪರಾರಿಯಾಗುವ ಗ್ಯಾಂಗ್ ಒಂದು ಹುಬ್ಬಳ್ಳಿಗೆ ಬಂದಿದೆ ಹುಷಾರ್..
ನಿನ್ನೆ ಹುಬ್ಬಳ್ಳಿಯ ಕೊಪ್ಪಿಕರ ರಸ್ತೆ ಮತ್ತು ಗೋಕುಲ ರಸ್ತೆಯ ಪ್ರಮುಖ ಬ್ರ್ಯಾಂಡೆಡ್ ಬಟ್ಟೆ ಅಂಗಡಿಗಳಿಗೆ ನುಗ್ಗಿದ ಕಪಲ್ ಗ್ಯಾಂಗ್ ಬಟ್ಟೆ ಖರೀದಿ ಮಾಡಿದಂಗ ಮಾಡಿ ಗಲ್ಲೆಯಲ್ಲಿದ್ದ ಹಣ ಕದ್ದು ಪರಾರಿಯಾದ ಘಟನೆ ಜರುಗಿದೆ.
ಈ ಹುಡುಗಾ ಹುಡುಗಿ ಹುಬ್ಬಳ್ಳಿಯಲ್ಲಿ ನಡೆಸಿದ ಕಳ್ಳತನದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.ಹುಬ್ಬಳ್ಳಿಯ ಉಪನಗರ ಪೋಲೀಸ ಠಾಣೆ ವ್ಯಾಪ್ತಿಯಲ್ಲಿ ಮೂರು ಅಂಗಡಿ ಹಾಗೂ ಗೋಕುಲ ಪೋಲೀಸ ಠಾಣಾ ವ್ಯಾಪ್ತಿಯಲ್ಲಿ ಒಂದು ಅಂಗಡಿ ಕಳ್ಳತನದ ಪ್ರಕರಣ ದಾಖಲಾಗಿದೆ.