ಯುವತಿ ಹಾಗೂ ಯುವತಿಯ ಗೆಳತಿಯರ ಎಡಿಟ್ ನಗ್ನ ಪೋಟೋಗಳನ್ನ ವೈರಲ್ ಮಾಡಿದ ಭೂಪ.
ಬೆಳಗಾವಿ:-ಬೆಳಗಾವಿ ಜಿಲ್ಲೆಯ ಖಾನಾಪುರದಲ್ಲಿ ಯುವಕನೊಬ್ಬ ಒಂದು ಹುಡುಗಿಯನ್ನು ಪ್ರೀತಿಸುತ್ತಿದ್ದ.ಆದರೆ ಆ ಹುಡುಗಿ ಅವನ ಪ್ರೀತಿಗೆ ನೋ ಅಂದಿದ್ದಳು ನೋ ಅಂದಿದ್ದಕ್ಕೆ ನಿನ್ನ ಹಾಗೂ ನಿನ್ನ ಗೆಳತಿಯರಿಗೆ ಹೇಗೆ ಅವಮಾನ ಮಾಡ್ತೇನಿ ನೋಡತಾ ಇರು ಅಂತಾ ಹೇಳಿ ಆ ಹುಡುಗಿಯ ಅಕೌಂಟನಿಂದ ಪೋಟೋ ಕದ್ದು ನಗ್ನ ಪೋಟೋಗಳಿಗೆ ಎಡಿಟ್ ಮಾಡಿ ಫೇಕ್ ಅಕೌಂಟ್ ನಲ್ಲಿ ಅಪ್ಲೋಡ ಮಾಡಿದ್ದ.
ಅಷ್ಟೇ ಅಲ್ಲದೇ ಅವಳ ಗೆಳತಿಯರ ಪೋಟೋ ಕದ್ದು ಅವುಗಳ ಪೋಟೋ ಎಡಿಟ್ ಮಾಡಿ ಅಪ್ಲೋಡ ಮಾಡಿದ್ದ.
ಆ ಯುವತಿ ಧೈರ್ಯವಾಗಿ ಪೋಲೀಸ ಠಾಣೆಗೆ ಹೋಗಿ ಹುಡುಗ ಮಂಥನ.ಪಾಟೀಲ ಮೇಲೆ ದೂರು ದಾಖಲು ಮಾಡಿದ್ದಳು.ದೂರು ದಾಖಲಿಸಿಕೊಂಡಿದ್ದ ಖಾನಾಪುರ ಪೋಲೀಸರು ಮಂಥನ ಪಾಟೀಲನನ್ನು ಜೈಲಿಗೆ ಅಟ್ಟಿದ್ದಾರೆ.
ಇಂತಹ ಪ್ರಕರಣಗಳಲ್ಲಿ ಯುವತಿಯರು ಇರಬಹುದು ಯುವಕರಿರಬಹುದು ಧೈರ್ಯವಾಗಿ ಪೋಲೀಸ ಠಾಣೆಗೆ ಬಂದು ದೂರನ್ನು ದಾಖಲಿಸುವಂತೆ ಬೆಳಗಾವಿ ಎಸ್.ಪಿ ಭೀಮಾಶಂಕರ ಗುಳೇದ ಮನವಿ ಮಾಡಿದ್ದಾರೆ.
ಉದಯ ವಾರ್ತೆ ಬೆಳಗಾವಿ