ಧಾರವಾಡ ಎಡಿಷನಲ್ ಎಸ್ಪಿ ಮೇಲೆ ಕೈ ಎತ್ತಿದ ಸಿಎಂ..ಪೋಲೀಸ ಅಧಿಕಾರಿ ನಾರಾಯಣ ಭರಮನಿ ಅವರಿಗೆ ಹೊಡೆಯಲು ಹೋದ ಸಿಎಂ.
ಬೆಳಗಾವಿ:-ಬೆಲೆ ಏರಿಕೆ ಖಂಡಿಸಿ ಬೆಳಗಾವಿಯಲ್ಲಿ ಆಯೋಜಿಸಿದ್ದ ಪ್ರತಿಭಟನಾ ಸಮಾವೇಶದಲ್ಲಿ ಸಿಎಂ ಸಿದ್ಧರಾಮಯ್ಯ ಭಾಷಣದ ವೇಳೆ ಧಾರವಾಡ ಎಡಿಷನಲ್ ಎಸ್ಪಿ ನಾರಾಯಣ ಭರಮನಿ ಮೇಲೆ ಕೈ ಎತ್ತಿದ ಘಟನೆ ನಡೆಯಿತು.
ಸಿಎಂ ಭಾಷಣದ ವೇಳೆ ಬಿಜೆಪಿ ಮಹಿಳಾ ಕಾರ್ಯಕರ್ತರು ಸಿಎಂ ಸಿದ್ದರಾಮಯ್ಯ ವಿರುದ್ಧ ಘೋಷಣೆ ಕೂಗುತ್ತಿದ್ದಂತೆ ಪೋಲೀಸ ಅಧಿಕಾರಿ ನಾರಾಯಣ ಭರಮನಿ ವಿರುದ್ಧ ಸಿದ್ಧರಾಮಯ್ಯ ಗರಂ ಆಗಿ ಕೈ ಎತ್ತಿದ್ದಾರೆ.