ಕ್ರೇನ್ ಕದ್ದ ಕಿಲಾಡಿ ಕಳ್ಳ..ಹೆಂಗ ಕದ್ದ..ಹೆಂಗ ಸಿಕ್ಕ ಬಿದ್ದ..ಕ್ರೇನ್ ಅಪರೇಷನ್…
ಹುಬ್ಬಳ್ಳಿ:- ಹುಬ್ಬಳ್ಳಿಯ ತಾರಿಹಾಳ ಗ್ರಾಮದಲ್ಲಿ ನಿಲ್ಲಿಸಲಾಗಿದ್ದ ಕ್ರೇನೊಂದನ್ನು ಕಳ್ಳತನ ಮಾಡಿಕೊಂಡು ಹೋಗಿದ್ದ ಆರೋಪಿಯನ್ನು ಹುಬ್ಬಳ್ಳಿ ಗ್ರಾಮೀಣ ಪೋಲೀಸರು ಹೆಡಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.
ಕ್ರೇನ್ ಕಳ್ಳತನ ಮಾಡಿಕೊಂಡು ಹೋಗಿದ್ದ ಆ ಕಿಲಾಡಿ ಪೋಲೀಸರಿಗೂ ಸಾಕ್ಷಿ ಸಿಗದಂತೆ ಎಲ್ಲೆಲ್ಲಿ ಸಿಸಿಟಿವಿ ಇವೆ ಎಂಬುದನ್ನು ಗಮನಿಸುತ್ತಾ ಸುಮಾರು ಐದಾರುನೂರು ಕಿಲೋಮೀಟರವರೆಗೆ ಒಯ್ದಿದ್ದಾನೆ…
ಹುಬ್ಬಳ್ಳಿ ಗ್ರಾಮೀಣ ಪೋಲೀಸರು ಅಂದರೆ ಸುಮ್ಮನೇನಾ..ಐರನ್ ಮ್ಯಾನ್ ಕಟ್ಟಿದ ಬಲೆಗೆ ನೂರಾರು ಕಿಲೋಮೀಟರ್ ಸಂಚರಿಸಿದ ಆ ಕ್ರೇನ್ ಮತ್ತು ಆರೋಪಿಯನ್ನು ಹಿಡಿದು ತಂದೇ ಬಿಟ್ಟಿದ್ದಾರೆ..