ಯಲ್ಲಾಪುರ DRFO ಶ್ರೀನಿವಾಸ ನಾಯಕ ಹುಲಿ ಪೆಂಡೆಂಟ್ ವಿಚಾರ.ನೋಟೀಸ್ ಕೊಟ್ಟು ಕೈ ತೊಳೆದುಕೊಂಡರಾ ಅಧಿಕಾರಿಗಳು.FIR ಯಾಕಿಲ್ಲಾ.

Share to all

ಯಲ್ಲಾಪುರ DRFO ಶ್ರೀನಿವಾಸ ನಾಯಕ ಹುಲಿ ಪೆಂಡೆಂಟ್ ವಿಚಾರ.ನೋಟೀಸ್ ಕೊಟ್ಟು ಕೈ ತೊಳೆದುಕೊಂಡರಾ ಅಧಿಕಾರಿಗಳು.

ಯಲ್ಲಾಪುರ:-ಹುಲಿ ಉಗುರಿನ ಪೆಂಡೆಂಟ್ ಧರಿಸಿದ್ದ ಯಲ್ಲಾಪುರ DRFO ಶ್ರೀನಿವಾಸ ನಾಯಕ ಅವರ ಪೋಟೋ ಅಕ್ಟೋಬರ್ 30 ರಂದು ವೈರಲ್ ಆಗಿತ್ತು.

ಅಂದೇ ಉದಯ ವಾರ್ತೆ ವನ್ಯಜೀವಿ ರಕ್ಷಕರೇ ಭಕ್ಷಕರಾದರೆ ಹೇಗೆ? ಅಂತಾ ಉದಯ ವಾರ್ತೆ ಸುದ್ದಿ ಪ್ರಸಾರ ಮಾಡಿತ್ತು.ವರದಿ ಪ್ರಸಾರ ಆದ ಎರಡ್ಮೂರು ದಿನಗಳ ಮೇಲೆ ಅವರಿಗೊಂದು ಕಾಟಾಚಾರಕ್ಕೆ ನೋಡೀಸ್ ನೀಡಿ ಕೈ ತೊಳೆದುಕೊಂಡಿದ್ದರು.

ನಂತರ ಉದಯ ವಾರ್ತೆ ಸಂಬಂದಿಸಿದ ಅಧಿಕಾರಿಗಳಿಗೆ ಮಾತನಾಡಿದರೆ ಒಬ್ಬೊಬ್ಬ ಅಧಿಕಾರಿಗಳಿಂದ ಒಂದೊಂದು ಉತ್ತರ.RFO ಎಲ್ ಎ ಮಠ ಅವರು ನೋಟೀಸ್ ಕೊಟ್ಟಿದ್ದೇವೆ ಉತ್ತರ ಕೊಡಬೇಕು ಅಂತಾ ಹೇಳಿ ಮನೆ ಸಚ್೯ ಮಾಡಿ ಪೆಂಡೆಂಟ್ ವಶಪಡಿಸಿಕೊಳ್ಳದೇ ಹಾಗೆ ಬಂದು ಅವರೇ ತಂದು ಕೊಟ್ಟ ಮೇಲೆ FSIL ಗೆ ಕಳಸ್ತಾರೆ ಅಂದರೆ ಏನರ್ಥ ಸ್ವಾಮಿ.

ACF ಆನಂದವರನ್ನ ಕೇಳಿದರೆ ಅವರದೊಂದು ಉತ್ತರ.DCF ಎಸ್.ಜಿ.ಹೆಗಡೆ ಅವರನ್ನ ಕೇಳಿದರೆ ಅವರದು ಇನ್ನೊಂದು ಉತ್ತರ CFO ವಸಂತ ರೆಡ್ಡಿ ಅವರನ್ನ ಕೇಳಿದರೆ ಶಿಸ್ತು ಕ್ರಮ ತೆಗೆದುಕೊಳ್ಳಬೇಕು ಅನ್ನುತ್ತಾರೆ.ಒಟ್ಟಾರೆ ಅರಣ್ಯ ಅಧಿಕಾರಿಗಳಿಂದ ಶ್ರೀನಿವಾಸ ನಾಯಕ ಅವರನ್ನು ರಕ್ಷಿಸುವ ಕೆಲಸ ನಡೀತಾ ಅಂತಾ ಸಾರ್ವಜನಿಕರ ಪ್ರಶ್ನೆ ಆಗಿದೆ.

ಈ ವನ್ಯ ಜೀವಿಗಳ ರಕ್ಷಣೆ ಕಾನೂನಿನಲ್ಲಿ ಸಾಮಾನ್ಯರ ಬಳಿ ವನ್ಯ ಜೀವಿಗಳ ವಸ್ತುಗಳು ಸಿಕ್ಕರೆ ಅವು ಹೌದೋ ಅಲ್ಲವೋ ಗೊತ್ತಿಲ್ಲದೇ FIR ದಾಖಲೆ ಮಾಡುವ ಅಧಿಕಾರಿಗಳು ಈ ಶ್ರೀನಿವಾಸ ನಾಯ್ಕ ಅವರ ಮೇಲಿಲ್ಲಾ ಅನ್ನೋದನ್ನ ಅಧಿಕಾರಿಗಳೇ ಹೇಳಬೇಕು.

ಶ್ರೀನಿವಾಸ ನಾಯ್ಕ ಕರ್ನಾಟಕ ರಾಜ್ಯ ಉಪವಲಯ ಅರಣ್ಯಾಧಿಕಾರಿ ಹಾಗೂ ಮೋಜಣಿದಾರರ ಸಂಘದ ರಾಜ್ಯಾದ್ಯಕ್ಷರು ಮತ್ತು ಶಿರಸಿ ವ್ರತ್ತದ ಜಿಲ್ಲಾದ್ಯಕ್ಷರು ಆಗಿರುವ ಹಿನ್ನೆಲೆಯಲ್ಲಿ ಹಿರಿಯ ಅಧಿಕಾರಿಗಳ ಮೇಲೆ FIR ಮಾಡದಂತೆ ಒತ್ತಡ ತಂದರಾ ಅನ್ನೋ ಅನುಮಾನ ಮೂಡತಾ ಇದೆ.

ಕಳೆದ ವಾರ ಯಲ್ಲಾಪುರ ವಿಭಾಗದಲ್ಲಿ ಗಂಧದ ಮರಗಳ್ಳರ ತಂಡದವರನ್ನು ಅರೆಷ್ಟ ಮಾಡುವ ಸಂದರ್ಭದಲ್ಲಿಸಿಕ್ಕ ವನ್ಯಪ್ರಾಣಿಗಳ ಅವಶೇಷಗಳ ಜಪ್ತಿ ಪಡಿಸಿದ್ದರು.ಅವುಗಳು ವನ್ಯಪ್ರಾಣಿಗಳದ್ದೆ ಎಂದು ಖಾತ್ರಿ ಆಗುವ ಮೊದಲೇ ವನ್ಯಜೀವಿ ಕಾಯ್ದೆ ಹಾಕಿ ಪ್ರಕರಣ ದಾಖಲಿಸಿ ಜೈಲಿಗೆ ಹಾಕಿದ್ದಾರೆ. ಆದರೆ ಅರಣ್ಯಅಧಿಕಾರಿಯ ಬಳಿ ಸಿಕ್ಕ ಹುಲಿ ಉಗುರಿನ ಪೆಂಡೆಂಟ್ ಖಾತ್ರಿಗಾಗಿ ಪ್ರಯೋಗಲಯದ ವರದಿ ಬಂದ ನಂತರ ಅರಣ್ಯಧಿಕಾರಿಯಮೇಲೆ ಸೂಕ್ತ ಕ್ರಮ ಕೈಗೊಲ್ಲುವುದಾಗಿ ಯಲಾಪುರ ಎಸಿ ಎಫ್ ರವರು ಪತ್ರಿಕೆಗೆ ಮಾಹಿತಿ ನೀಡಿರುತ್ತಾರೆ.
ಈ ಪ್ರಕರಣದಲ್ಲಿ ಹೀಗಾದರೆ ಅರಣ್ಯ ಅಧಿಕಾರಿ ಶ್ರೀನಿವಾಸ ನಾಯ್ಕ ಅವರ ಪ್ರಕರಣದಲ್ಲಿ ಆರೆಸ್ಟ ಯಾಕಿಲ್ಲಾ.

ಪ್ರಕರಣ ದಾಖಲಿಸಿ ಶಿಸ್ತು ಕ್ರಮ ಕೈಗೊಳ್ಳದಿರುವ ಹಾಗೆ ಈ ಹಿಂದಿನ ಕೆನರಾ ವ್ರತ್ತದ ಜಿಲ್ಲಾ ಅರಣ್ಯಧಿಕಾರಿಯವರ ಒತ್ತಡ ಇದೆಯಾ ಎಂದು ಮಾತನಾಡಿಕೊಳ್ಳುತ್ತಿದ್ದಾರೆ.

ಸಾಮಾನ್ಯರಿಗೊಂದು ಕಾನೂನು ಅಧಿಕಾರಿಗಳಿಗೊಂದು ಕಾನೂನೇ ಅನ್ನುವ ಪ್ರಶ್ನೆಗೆ ಅರಣ್ಯ ಸಚಿವರೇ ಉತ್ತರ ಕೊಡಬೇಕಾಗುತ್ತೇ.

ಉದಯ ವಾರ್ತೆ ಯಲ್ಲಾಪುರ.


Share to all

You May Also Like

More From Author