ಗ್ರಾಮ ಪಂಚಾಯತ ಸದಸ್ಯನ ಕೊಲೆ,ಇಬ್ಬರು ಬಂಧನ. ಕೊಲೆ ನಡೆದು 24 ಗಂಟೆಯಲ್ಲಿ ಆರೋಪಿಗಳಿಗೆ ಹೆಡಮುರಿ ಕಟ್ಟಿದ ಇನಸ್ಪೆಕ್ಟರ್ ಶ್ರೀಶೈಲ ಕೌಜಲಗಿ ಆ್ಯಂಡ್ ಟೀಮ್.

Share to all

ಗ್ರಾಮ ಪಂಚಾಯತ ಸದಸ್ಯನ ಕೊಲೆ,ಇಬ್ಬರು ಬಂಧನ. ಕೊಲೆ ನಡೆದು 24 ಗಂಟೆಯಲ್ಲಿ ಆರೋಪಿಗಳಿಗೆ ಹೆಡಮುರಿ ಕಟ್ಟಿದ ಇನಸ್ಪೆಕ್ಟರ್ ಶ್ರೀಶೈಲ ಕೌಜಲಗಿ ಆ್ಯಂಡ್ ಟೀಮ್.

ಕಲಘಟಗಿ –

ಧಾರವಾಡದ ಕಲಘಟಗಿ ತಾಲ್ಲೂಕಿನ ಬಗಡಗೇರಿ ಗ್ರಾಮದಲ್ಲಿ ನಡೆದ ಗ್ರಾಮ ಪಂಚಾಯತ ಸದಸ್ಯನ ಕೊಲೆ ಪ್ರಕರಣವನ್ನು ಪೊಲೀಸರು ಬೇಧಿಸಿದ್ದಾರೆ.ಹೌದು ನಿನ್ನೆ ಸಂಜೆ ಗ್ರಾಮದಲ್ಲಿ ನಡೆದ ಪಂಚಾಯತ ಸದಸ್ಯರೊಬ್ಬರು ಈ ಒಂದು ಕೊಲೆ ಪ್ರಕರಣವನ್ನು 24 ಗಂಟೆಗಳಲ್ಲಿ ಪೊಲೀಸರು ಪತ್ತೆ ಮಾಡಿ ಆರೋಪಿಗಳನ್ನು ಬಂಧನ ಮಾಡಿದ್ದಾರೆ.

ಬಗಡಗೇರಿ ಗ್ರಾಮದಲ್ಲಿ ನಿನ್ನೆ ಸಂಜೆ ಈ ಒಂದು ಕೊಲೆ ಪ್ರಕರಣವು ನಡೆದಿತ್ತು.ಗ್ರಾಮ ಪಂಚಾಯತಿ ಸದಸ್ಯ ನಿಂಗಪ್ಪ ದಾಸಪ್ಪನವರ ಕೊಲೆಯಾದ ಗ್ರಾಮ ಪಂಚಾಯತ ಸದಸ್ಯನಾಗಿದ್ದನು.

ನಾಲ್ಕು ಏಕರೆ ಜಮೀನಿಗಾಗಿ ನಿಂಗಪ್ಪನನ್ನು ಮಾವ ಮತ್ತು ಅಳಿಯ ಸೇರಿಕೊಂಡು ಕೊಲೆಯನ್ನು ಮಾಡಿದ್ದರು. ಸಂಭಂಧಿಕರು ಅತ್ತೆಯ ಮಕ್ಕಳಿಂದ ಗ್ರಾಮದ ಬಸ್ ನಿಲ್ದಾಣದಲ್ಲಿ ಭೀಕರವಾಗಿ ಕೊಲೆಯಾಗಿದ್ದನು ಕೊಲೆ ನಡೆದು 24 ಗಂಟೆಯಲ್ಲಿ ಕೊಲೆಯ ಮಾಡಿದ ಇಬ್ಬರು ಆರೋಪಿಗಳನ್ನು ಬಂಧನ ಮಾಡಿದ್ದಾರೆ.

ನಾಲ್ಕ ಏಕರೆ ಜಮೀನನ್ನು ತನ್ನ ಹೆಸರಿಗೆ ಮಾಡಿಕೊಳ್ಳಲು ಮುಂದಾಗಿದ್ದನಂತೆ ಗ್ರಾಮ ಪಂಚಾಯತ ಸದಸ್ಯ ನಿಂಗಪ್ಪ.ಈ ಒಂದು ವಿಚಾರವನ್ನು ತಿಳಿದು ನಿಂಗಪ್ಪನನ್ನು ಕೊಲೆ ಮಾಡಿದ್ದಾರೆ ತಂದೆ ಮತ್ತು ಮಗ.ಕೊಲೆ ಮಾಡಿ ಎಸ್ಕೇಫ್ ಆಗಿದ್ದರು.

ಇಬ್ಬರು ಆರೋಪಿಗಳನ್ನು ಕಾರಡಗಿ ದೇವಸ್ಥಾನದಲ್ಲಿ ಪೊಲೀಸರು ಬಂಧಿಸಿದ್ದಾರೆ.ಬಂಧಿತರನ್ನು ಮಲ್ಲಪ್ಪ ದಂಡಿನ,ನಾಗಪ್ಪ ದಂಡಿನ ಎಂದು ಗುರುತಿಸಲಾಗಿದೆ.

ಉದಯ ವಾರ್ತೆ ಹುಬ್ಬಳ್ಳಿ


Share to all

You May Also Like

More From Author