ಸ್ವಂತ ಮಗಳಿಗೆ ವಂಚನೆ ಮಾಡಿದ್ದಾನಂತೆ ತಂದೆ.ನ್ಯಾಯಕ್ಕಾಗಿ ಬೀದಿ ಬೀದಿ ಅಲೆಯುತ್ತಿರುವ ಅಸಹಾಯಕ ಮಗಳು..
ಹುಬ್ಬಳ್ಳಿ: ಹಣ ಅಂದರೆ ಹೆಣನೂ ಬಾಯಿ ತೆಗೆಯುತ್ತೇ ಅನ್ನೋ ಗಾದೆ ಮಾತಿದೆ.ಆ ಗಾದೆ ಮಾತಿಗೆ ಸಾಕ್ಷಿ ಎಂಬಂತೆ ಇಲ್ಲೊಬ್ಬ ತಂದೆ ಹೆತ್ತ ಮಗಳನ್ನು ವಂಚನೆ ಮಾಡಲು ಬಿಟ್ಟಿಲ್ವಂತೆ
ಹೌದು ಈಗ ನಾವ ಹೇಳ್ತಾ ಇರೋ ಸ್ಟೋರಿ ಗುರುಶಿದ್ಧಪ್ಪ.ಗೌರಿ ಅಂತಾ ಒಂದು ಕಡೆ ಹೆತ್ತ ಮಗಳಿಗೆಯೇ ವಂಚನೆ ಮಾಡಿದ್ದಾಗಿ ಆರೋಪ ಮಾಡತಿರುವ ಮಹಿಳೆ ಮತ್ತೊಂದು ಕಡೆ ಜಮೀನು ಕೊಡಿಸುವುದಾಗಿ 25 ಲಕ್ಷ ರೂಪಾಯಿ ವಂಚಿಸಿದ ಆರೋಪ. ಎರಡು ಪ್ರಕರಣ ಬೇರೆ ಬೇರೆಯಾಗಿದ್ದರೂ ಆರೋಪ ಬಂದಿದ್ದು, ಮಾತ್ರ ಒಬ್ಬ ವ್ಯಕ್ತಿಯ ಮೇಲೆಯೇ.
ಕಂಡ ಕಂಡವರ ಮುಂದೆ ಕಣ್ಣೀರು ಹಾಕುತ್ತಿರುವ ಇಬ್ಬರು ಅಸಹಾಯಕ ಮಹಿಳೆಯರು. ಜೀವ ಭಯವಿದೆ ನಮಗೆ ಭದ್ರತೆ ಕೊಡಿ ಹಾಗೂ ನ್ಯಾಯ ಕೊಡಿಸಿ ಎಂದು ಕಣ್ಣೀರು ಹಾಕುತ್ತಿರುವ ಮಹಿಳೆಯರು.
ಹೌದು ಗುರುಸಿದ್ಧಪ್ಪ ಗೌರಿ ಎಂಬಾತನೇ ಹೆತ್ತ ಮಗಳಿಗೆ ಉಡುಗೊರೆಯಾಗಿ ಮನೆ ನೀಡಿ ಬಳಿಕ ಕಸಿದುಕೊಂಡು ವಂಚಿಸಿದ್ದಾನಂತೆ. ಅಲ್ಲದೇ ನೀಲವ್ವ ಮಾಶೆಟ್ಟಿ ಎಂಬುವ ಮಹಿಳೆಗೆ ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ 25 ಲಕ್ಷ ಹಣವನ್ನು ವರ್ಗಾಯಿಸಿಕೊಂಡು ವಂಚಿಸಿರುವ ಬಗ್ಗೆ ಮಹಿಳೆಯರು ಆರೋಪ ಮಾಡಿದ್ದಾರೆ. ನೀಲವ್ವ ಮಾಶೆಟ್ಟಿ ಎಂಬುವವರು ಗಬ್ಬೂರಿನ ಬಳಿಯಲ್ಲಿ 3 ಎಕರೆ ಜಮೀನು ಹೊಂದಿದ್ದು, ಅದರಲ್ಲಿ 1 ಎಕರೆ 28 ಗುಂಟೆ ರಿಂಗ್ ರೋಡಿಗೆ ಹೋಗಿದೆ. ಈ ನಿಟ್ಟಿನಲ್ಲಿ ಪ್ರಾಧಿಕಾರದಿಂದ 25 ಲಕ್ಷ ಪರಿಹಾರ ಧನ ಬಂದಿದೆ. ಇನ್ನೂಳಿದ ಜಮೀನಿನಲ್ಲಿ 34 ಗುಂಟೆ 8 ಅಣೆ ನೀಲವ್ವ ಅವರ ಮಕ್ಕಳಿಗೆ ಹಾಗೂ 17 ಗುಂಟೆ 8 ಅಣೆ ಜಮೀನು ನೀಲವ್ವ ಮಾಶೆಟ್ಟಿಯವರ ಗಂಡನ ಮೊದಲ ಹೆಂಡತಿಯ ಮಕ್ಕಳಿಗೆ ಹೋಗಿದೆ. ಆದರೆ ಇದರಲ್ಲಿ ಮಧ್ಯಸ್ಥಿಕೆ ವಹಿಸಲು ಬಂದು ಜಮೀನು ಕೊಡಿಸುವ ನೆಪದಲ್ಲಿ 25 ಲಕ್ಷ ಹಣ ವರ್ಗಾಯಿಸಿಕೊಂಡು ವಂಚನೆ ಮಾಡಿರುವ ಬಗ್ಗೆ ನೀಲವ್ವ ಮಾಶೆಟ್ಟಿ ಆರೋಪಿಸಿದ್ದಾರೆ.
ಇನ್ನೂ ಹಣವನ್ನು ಕೇಳಿದರೇ ನೀಲವ್ವ ಮಾಶೆಟ್ಟಿ ಎಂಬುವವರಿಗೆ ಗುರುಸಿದ್ದಪ್ಪ ಗೌರಿ ಜೀವ ಬೆದರಿಕೆ ಹಾಕಿದ್ದು, ಮಾತ್ರವಲ್ಲದೆ ಅವಾಚ್ಯ ಶಬ್ಧದಿಂದ ನಿಂದಿಸಿರುವ ಬಗ್ಗೆ ನೀಲವ್ವ ಮಾಶೆಟ್ಟಿಯವರು ನೀಡಿದ ದೂರಿನ ಅನ್ವಯ ಕಸಬಾಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಲ್ಲದೇ ಗುರುಸಿದ್ಧಪ್ಪ ಗೌರಿಯ ವಂಚನೆ ಬಗ್ಗೆ ಹೆತ್ತ ಮಗಳೂ ಆರೋಪ ಮಾಡಿದ್ದಾರೆ.
ಒಟ್ಟಿನಲ್ಲಿ ಅವಳಿನಗರದಲ್ಲಿ ಇಂತಹದೊಂದು ಪ್ರಕರಣ ಇಬ್ಬರು ಅಸಹಾಯಕ ಮಹಿಳೆಯರಿಗೆ ಸಂಕಷ್ಟ ತಂದೊಡ್ಡಿದೆ. ಈ ಬಗ್ಗೆ ಪೊಲೀಸ್ ಆಯುಕ್ತರು ಸೂಕ್ತ ಪರಿಶೀಲನೆ ನಡೆಸಿ ಕಾನೂನು ರೀತಿಯಲ್ಲಿ ಕ್ರಮಗಳನ್ನು ಜರುಗಿಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಗಳನ್ನು ಜರುಗಿಸುವ ಕಾರ್ಯವನ್ನು ಮಾಡಬೇಕಿದೆ ಎಂಬುವುದು ಸಾರ್ವಜನಿಕರ ಆಗ್ರಹವಾಗಿದೆ.
ಉದಯ ವಾರ್ತೆ ಹುಬ್ಬಳ್ಳಿ.