ವಿಶೇಷಚೇತನ ಮಕ್ಕಳೊಂದಿಗೆ ಊಟ ಮಾಡಿ ಪ್ರಹ್ಲಾದ್ ಜೋಶಿಯವರ ಹುಟ್ಟು ಹಬ್ಬ ಆಚರಣೆ – ಅನುಪ ಬೀಜವಾಡ ನೇತ್ರತ್ವದಲ್ಲಿ ಹುಬ್ಬಳ್ಳಿಯಲ್ಲಿ ನಡೆಯಿತು ವಿಶೇಷ ಅರ್ಥಪೂರ್ಣ ಹುಟ್ಟು ಹಬ್ಬ ಆಚರಣೆಯ ಕಾರ್ಯಕ್ರಮ
ಹುಬ್ಬಳ್ಳಿ –
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಯವರ ಹುಟ್ಟು ಹಬ್ಬವನ್ನು ಹುಬ್ಬಳ್ಳಿಯಲ್ಲಿ ಅರ್ಥಪೂರ್ಣವಾಗಿ ಆಚರಣೆ ಮಾಡಲಾಯಿತು.ಹೌದು ಅವಳಿ ನಗರ ಸೇರಿದಂತೆ ಜಿಲ್ಲೆಯಾಧ್ಯಂತ ಕೇಂದ್ರ ಸಚಿವರ ಹುಟ್ಟು ಹಬ್ಬದ ಆಚರಣೆಯನ್ನು ತುಂಬಾ ವಿಶೇಷವಾಗಿ ಅದರಲ್ಲೂ ಯಾವುದೇ ವೇದಿಕೆ ಕಾರ್ಯಕ್ರಮ ಸೇರಿದಂತೆ ಯಾವುದೇ ಕಾರ್ಯಕ್ರಮವನ್ನು ಮಾಡದೇ ವಿಶೇಷ ಚೇತನ ಅಂಗವಿಕಲ ಮಕ್ಕಳೊಂದಿಗೆ ಊಟವನ್ನು ಮಾಡುತ್ತಾ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರ ಹುಟ್ಟು ಹಬ್ಬವನ್ನು ಆಚರಣೆ ಮಾಡಿದರು.ಹುಬ್ಬಳ್ಳಿ ಧಾರವಾಡ ಸೇರಿದಂತೆ ಜಿಲ್ಲೆಯಾಧ್ಯಂತ ಬೇರೆ ಬೇರೆ ಕಾರ್ಯಕ್ರಮಗಳನ್ನು ಪಕ್ಷದ ನಾಯಕರು ಮುಖಂಡರು ಕಾರ್ಯಕರ್ತರು ಹಮ್ಮಿಕೊಂಡಿದ್ದು ಹೀಗಾಗಿ ಅನುಪ ಬೀಜವಾಡ ನೇತ್ರತ್ವದಲ್ಲಿ ನಗರದ ಹೊರವಲಯದ ಹೊಸಗಬ್ಬೂರಿನಲ್ಲಿರುವ ವಿಶ್ವಧರ್ಮ ಅಂಗಲಿಕಲರ ಶಾಲೆಯಲ್ಲಿ ಮಕ್ಕಳಿಗಾಗಿ ವಿಶೇಷ ಭೋಜನದ ವ್ಯವಸ್ಥೆಯನ್ನು ಮಾಡಲಾಗಿತ್ತು. ಅನುಪ ಬೀಜವಾಡ ನೇತ್ರತ್ವದಲ್ಲಿನ ಟೀಮ್ ಶಾಲೆಯ ಅಂಗವಿಕಲ ಮಕ್ಕಳಿಗೆ ಊಟವನ್ನು ತಾವೇ ಸ್ವತಃ ನೀಡುತ್ತಾ ನಂತರ ಮಕ್ಕಳೊಂದಿಗೆ ಕುಳಿತುಕೊಂಡು ಊಟ ಮಾಡಿ ಈ ಮೂಲಕ ಪ್ರಹ್ಲಾದ್ ಜೋಶಿಯವರ ಹುಟ್ಟು ಹಬ್ಬವನ್ನು ಆಚರಣೆ ಮಾಡಿದರು. ಮಕ್ಕಳಿಗಾಗಿ ವಿಶೇಷವಾದ ಚಪಾತಿ,ಬದನೆಕಾಯಿ,ಜಾಮೂನ್ ಮಡಕಿಕಾಳು,ಅಣ್ಣ ಸಾಂಬಾರ್ ಹೀಗೆ ಬೋಜನದ ವ್ಯವಸ್ಥೆಯನ್ನು ಮಾಡಲಾಗಿತ್ತು.ಇದರೊಂದಿಗೆ ಬಿಜೆಪಿ ಯ ನಾಯಕರು ಪಕ್ಷದ ಕಾರ್ಯಕರ್ತರು ಮುಖಂಡರು ಅರ್ಥಪೂರ್ಣವಾಗಿ ಹುಟ್ಟು ಹಬ್ಬ ಆಚರಿಸಿದರು.ಅನುಪ ಬಿಜವಾಡ,ಪ್ರಭು ನವಲಗುಂದಮಠ,ಶಿವಾನಂದ ಮುತ್ತಣ್ಣನವರ,ಮಾರುತಿ ಚಾಕಲಬ್ಬಿ,ಕರಿಯಪ್ಪ ಗುಡಿಹಾಳ,ಮಹೇಶ್ ಸಂತಪ್ಪನವರ,ಸಂದೀಪ ಶಿರಸಂಗಿ,ಗೋವಿಂದ ಬೇಂದ್ರೆ,ಶಿವಯ್ಯ ಹಿರೇಮಠ|ಮಾರುತಿ ಸೋನ್ನದ,ಶಿವು ಅಂಬಿಗೇರ,ಪಕ್,ದ ಕಾರ್ಯಕರ್ತರು ಮುಖಂಡರು ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಉದಯ ವಾರ್ತೆ ಹುಬ್ಬಳ್ಳಿ