28 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನ ಆರೆಸ್ಟ್ ಮಾಡಿದ ಬೆಂಡಿಗೇರಿ ಪೋಲೀಸರು.
ಹುಬ್ಬಳ್ಳಿ:-ಹುಬ್ಬಳ್ಳಿಯ ತಾರಿಹಾಳ ಗ್ರಾಮದ 57 ವರ್ಷದ ಮಹ್ಮದ ಹೊಸಮನಿ ಎಂಬಾತ 28 ವಷಗಳ ಹಿಂದೆ ಪ್ರಕರಣವೊಂದರಲ್ಲಿ ಜೈಲು ಸೇರಿದ್ದ.ನಂತರ ಜಾಮೀನಿನ ಮೇಲೆ ಹೊರಗೆ ಬಂದು ನ್ಯಾಯಾಲಯಕ್ಕೂ ಹಾಜರಾಗದೇ ತಪ್ಪಿಸಿ ಅಡ್ಯಾಡುತ್ತಿದ್ದ.ನ್ಯಾಯಾಲಯ LPC ಪ್ರಕರಣ ಅಂತಾ ಪರಿಗಣಿಸಿ ಅವನ ಮೇಲೆ ವಾರೆಂಟ್ ಜಾರಿ ಮಾಡಿತ್ತು.
ಆ ಹಿನ್ನೆಲೆಯಲ್ಲಿ ಬೆಂಡಿಗೇರಿ ಪೋಲೀಸರು ಇಂದು ಆರೋಪಿಯನ್ನ ಬಂಧನ ಮಾಡಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ಆರೋಪಿತನ ಪತ್ತೆಗಾಗಿ ಕೆಲಸ ಮಾಡಿದ ಪೋಲೀಸ ಟೀಂಗೆ ಪೋಲೀಸ ಕಮೀಷನರ್ ರೇಣುಕಾ ಸುಕುಮಾರ ಅಭಿನಂದನೆ ಸಲ್ಲಿಸಿದ್ದಾರೆ.
ಉದಯ ವಾರ್ತೆ ಹುಬ್ಬಳ್ಳಿ