ಹುಬ್ಬಳ್ಳಿ ಮೂರುಸಾವಿರ ಮಠದ ಸ್ವಾಮೀಜಿ ಬಿಚ್ಚಿಟ್ಟ ಸತ್ಯ.ಸಿದ್ಧರಾಮಯ್ಯ ಸಾಯೋವರೆಗೂ ವಿಧಾನಸೌದದಲ್ಲಿರಬೇಕು.
ಹಾವೇರಿ:- ಇಂದು ಹಾವೇರಿಯಲ್ಲಿ ನಡೆದ ಭಾವೈಕ್ಯತಾ ಸಮಾವೇಶದಲ್ಲಿ ಹುಬ್ಬಳ್ಳಿ ಮೂರುಸಾವಿರ ಮಠದ ಶ್ರೀ ಗುರುಶಿದ್ಧರಾಜಯೋಗೀಂದ್ರ ಸ್ವಾಮಿಗಳು ಐದು ವರ್ಷದ ಹಿಂದಿನ ಸತ್ಯವನ್ನ ಬಾಯ್ಬಿಟ್ಟಿದ್ದಾರೆ.
ಹೌದು ಇಂದು ಹಾವೇರಿಯಲ್ಲಿ ನಡೆದ ಭಾವೈಕ್ಯತಾ ಸಮಾವೇಶದಲ್ಲಿ ಮಾತನಾಡಿದ ಅವರು ಈ ಹಿಂದೆ ಸಿದ್ಧರಾಮಯ್ಯನವರು ಬದಾಮಿ ಚುನಾವಣೆಗೆ ನಿಂತಾಗ ಹಂಗರಗಿ ಮುಚಗಂಡಯ್ಯ ಅನ್ನೋ ವ್ಯಕ್ತಿಗೆ ಬಿಜೆಪಿ ಸಾಕಷ್ಟು ಒತ್ತಡ ಹಾಕಿತ್ತು. ಬಿಜೆಪಿಗೆ ಬರುವಂತೆ ಒತ್ತಡ ಹಾಕಿತ್ತು.
ಆ ವ್ಯಕ್ತಿ ನನಗೆ ಪೋನ್ ಮಾಡಿದ್ದ.ನಾನು ಯಾವುದೇ ಕಾರಣಕ್ಕೂ ಬಿಜೆಪಿಗೆ ಹೋಗಬೇಡಿ ಎಂದಿದ್ದೇ.ಅಲ್ಲಿ ಸಿದ್ಧರಾಮಯ್ಯ ಗೆಲ್ಲಬೇಕು ಎಂದಿದ್ದೇ.ಸಿದ್ಧರಾಮಯ್ಯ ಸಮಾಜವಾದಿ ತತ್ವ ಇರೋರು ಎಂದು ಹೇಳಿದ್ದೇ.ನಾನು ಜಂಗಮ ಅವನು ಜಂಗಮ ಆದ್ರೆ ಸಿದ್ದರಾಮಯ್ಯ ಹಾಲುಮತ ಸಿದ್ದರಾಮಯ್ಯ ಎಲ್ಲುವರೆಗೆ ಜೀವಂತ ಇರತಾರೋ ಅಲ್ಲಿವರೆಗೆ ವಿಧಾನಸೌಧದಲ್ಲಿ ಇರಬೇಕು ಎಂದು ಸ್ವಾಮೀಜಿ ಸಿದ್ಧರಾಮಯ್ಯ ಪರ ಬ್ಯಾಟಿಂಗ್ ಮಾಡಿದ್ದಾರೆ.
ಸ್ವಾಮೀಜಿ ಈ ರೀತಿ ಹೇಳಿದ್ದಕ್ಕೆ ಸಿಎಂ ಸಿದ್ದರಾಮಯ್ಯ ಹಂಗರಗಿ ಈಗಲೂ ನಮ್ಮ ಜೊತೆಯಲ್ಲಿಯೇ ಇದ್ದಾರೆ.ಸ್ವಾಮೀಜಿ ಅವರಿಗೆ ನನ್ನ ಪರವಾಗಿ ಹೇಳಿದ್ದಕ್ಕೆ ನಮೋ..ನಮೋ ಎಂದು ಸಿದ್ಧರಾಮಯ್ಯ ಕೈ ಮುಗಿದರು.
ಉದಯ ವಾರ್ತೆ ಹಾವೇರಿ