ಅಕ್ರಮ ಪಡಿತರ ಅಕ್ಕಿ ಸಾಗಾಟ ಮಾಡುತ್ತಿದ್ದ ಲಾರಿ ವಶ. ಇಬ್ಬರು ಆರೋಪಿಗಳೊಂದಿಗೆ ಲಕ್ಷಾಂತರ ರೂಪಾಯಿ ಮೌಲ್ಯದ ಅಕ್ಕಿ ವಶಕ್ಕೆ.
ವಿಜಯಪುರ –
ಅಕ್ರಮವಾಗಿ ಪಡಿತರ ಅಕ್ಕಿಯನ್ನು ಸಾಗಾಟ ಮಾಡುತ್ತಿದ್ದ ಲಾರಿಯನ್ನು ವಶಪಡಿಸಿಕೊಂಡು ಇಬ್ಬರು ಆರೋಪಿಗಳನ್ನು ಬಂಧನ ಮಾಡಿದ ಘಟನೆ ವಿಜಯಪುರದಲ್ಲಿ ನಡೆದಿದೆ.ಹೌದು ಅಕ್ರಮವಾಗಿ ಅಕ್ಕಿ ಸಾಗಾಟ ವೇಳೆ ಪೊಲೀಸರ ದಾಳಿಯನ್ನು ಮಾಡಿದ್ದಾರೆ.ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಬಸನಾಳ ರಸ್ತೆಯಲ್ಲಿ
ಈ ಒಂದು ಘಟನೆ ನಡೆದಿದೆ.ಅಂಜಾದ ಪಠಾಣ,ಅವಿನಾಶ್ ಘುಲೆ ಬಂಧಿತ ಆರೋಪಿಗಳಾಗಿದ್ದಾರೆ.ಸಂಭಾಜಿ ಗಾಯಕವಾಡ,ಪವನ ತೊಟ್ಲಾ ಈ ಇಬ್ಬರು ಮಾಲೀಕರು ಪರಾರಿಯಾಗಿದ್ದಾರೆ.ಆರೋಪಿಗಳು ಲಾರಿಯಲ್ಲಿ 8,23,310 ಮೌಲ್ಯದ 28,390 ಕೆಜಿ ಅಕ್ಕಿ ಸಾಗಾಟದ ವೇಳೆ ದಾಳಿ ಮಾಡಲಾಗಿದೆ.ಪೊಲೀಸರು ದಾಳಿಗೈದು ಅಕ್ಕಿಯೊಂದಿಗೆ ಲಾರಿಯನ್ನು ಜಪ್ತಿ ಮಾಡಲಾಗಿದೆ.ಹೊರ್ತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.
2) ಹುಬ್ಬಳ್ಳಿ ಸಿಸಿಬಿ ಪೋಲೀಸರ ಕಾರ್ಯಾಚರಣೆ..4.42 ಲಕ್ಷ ಮೌಲ್ಯದ ಪಡಿತರ ಅಕ್ಕಿ ವಶ.
ಹುಬ್ಬಳ್ಳಿ:- ಬಡವರಿಗಾಗಿ ಸರಕಾರ ನೀಡುತ್ತಿರುವ ಅಕ್ಕಿಯನ್ನ ಖರೀದಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ಸ್ಟಾಕ್ ಮಾಡಿದ್ದ ಅಕ್ಕಿ ದಂಧೆಕೋರನೊಬ್ಬನನ್ನು ಸಿಸಿಬಿ ಪೋಲೀಸರು ಬಂಧಿಸಿದ್ದಾರೆ.
ಹುಬ್ಬಳ್ಳಿಯ ಎಪಿಎಂಸಿಯಲ್ಲಿ ಗೋಡೌನ ಮಾಡಿಕೊಂಡಿದ್ದ ಸಂದೀಪ.ಜರತಾರಘರ ಜಿಲ್ಲೆಯ ವಿವಿದೆಡೆಯಿಂದ ಪಡಿತರ ಅಕ್ಕಿಯನ್ನು ಖರೀದಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದ 130 ಕ್ವಿಂಟಾಲ್ ಪಡಿತರ ಅಕ್ಕಿಯನ್ನ ವಶಪಡಿಸಿಕೊಂಡಿದ್ದಾರೆ.
ಉದಯ ವಾರ್ತೆ ಹುಬ್ಬಳ್ಳಿ
ಉದಯ ವಾರ್ತೆ ವಿಜಯಪುರ