ಹುಬ್ಬಳ್ಳಿಯಲ್ಲಿ ಗಾಂಜಾ ಗಮ್ಮತ್ತು.ಕಂಡು ಕಾಣದೆ ಕುರುಡರಾದ ಬೆಂಡಿಗೇರಿ ಪೋಲೀಸರು.
ಹುಬ್ಬಳ್ಳಿ:-ಹುಬ್ಬಳ್ಳಿಯನ್ನ ಛೋಟಾ ಮುಂಬೈ ಅಂತಾ ಕರೀತಾರೆ.ಇಂತಹ ಛೋಟಾ ಮುಂಬೈಯಲ್ಲೊಂದು ಅತೀ ಹಿಂದುಳಿದ ಪ್ರದೇಶದಲ್ಲಿರುವ ಬೆಂಡಿಗೇರಿ ಪೋಲೀಸ ಠಾಣಾ ವ್ಯಾಪ್ತಿಯಲ್ಲಿ ಗಾಂಜಾ ಮಾರಾಟ ಮತ್ತು ಬಳಕೆ ಎಗ್ಗಿಲ್ಲದೇ ನಡೆದಿದೆ.
ಬೆಂಡಿಗೇರಿ ಠಾಣಾ ವ್ಯಾಪ್ತಿಯ ವೀರಾಪುರ ಓಣಿಯ ಮಿಲ್ ಹಿಂದುಗಡೆ ಗಾಂಜಾ ಮಾರಾಟ ಮತ್ತು ಬಳಕೆ ಭರ್ಜರಿಯಾಗಿಯೇ ನಡೆದಿದೆ.ದಿನ ನಿತ್ಯ ಅಲ್ಲೇ ಸಂಚರಿಸುವ ಪೋಲೀಸರು ಕಣ್ಣು ಕಾಣದೇ ನಮಗ್ಯಾಕೆ ಎಂದು ಕಣ್ಮುಚ್ಚಿಕೊಂಡು ಹೋಗಿ ಬಿಡ್ತಾರಂತೆ ಅಲ್ಲಿಯ ಮಹಿಳೆಯರೇ ಮತಾಡತಾರೆ.ಈ ಪ್ರದೇಶದಲ್ಲಿ ಸರಕಾರಿ ಶೌಚಾಲಯವಿದ್ದು ಹೆಣ್ಮಕ್ಕಳು ಶೌಚಾಲಯಕ್ಕೆ ಹೋಗುವುದು ಕಷ್ಟವಾಗಿದೆ ಅಂತೆ.ಅಲ್ಲಿ ಗಾಂಜಾ ಮತ್ತಿನಲ್ಲಿ ಗಂಡಸರು ಮಹಿಳೆಯರನ್ನು ನೋಡುವ ರೀತಿನೇ ಬೇರೇ ಇರುತ್ತೆ ಅಂತೆ.
ಈ ಗಾಂಜಾ ಸೇದುವವರ ಸಂಖ್ಯೆ ಈ ಬೆಂಡಿಗೇರಿ ವ್ಯಾಪ್ತಿಯಲ್ಲಿ ಇದೆ ಎಂದಾದರೆ ಮಾರಾಟ ಮಾಡುವವರು ಇದ್ದೇ ಇರುತ್ತಾರೆ.ಇಂತಹ ಮಾರಾಟಗಾರರನ್ನು ಹಿಡಿದು ತಂದು ಪಾಠ ಕಲಿಸಬೇಕಾದ ಪೋಲೀಸರು ಮಾಡುತ್ತಿರುವುದಾದರೂ ಏನು ಎಂದು ಜನ ಪ್ರಶ್ನೆ ಮಾಡತಿದ್ದಾರೆ.
ಅದು ಹಿಂದುಳಿದ ಪ್ರದೇಶದಲ್ಲಿ ಗಾಂಜಾ ಹೆಚ್ಚಾಗುವುದರಿಂದ ನಗರದಲ್ಲಿ ಕ್ರೈಂ ಕೂಡಾ ಹೆಚ್ಚಾಗೋ ಸಾದ್ಯೆತೆ.ಬೆಂಡಿಗೇರಿ ಠಾಣಾ ವ್ಯಾಪ್ತಿಯಲ್ಲಿ ಈ ಹಿಂದೆ ನಡೆದ ಕ್ರೈಂಗಳಲ್ಲಿ ಭಾಗಿಯಾದವರು ಗಾಂಜಾ ಗಿರಾಕಿಗಳೇ ಹೆಚ್ಚು ಅನ್ನುವುದು ಅಲ್ಲಿಯ ಪೋಲೀಸರಿಗೂ ಗೊತ್ತು.ಈ ಗಾಂಜಾ ಮಾರಾಟದಲ್ಲಿ ಒಂದಿಬ್ಬರು ಪೋಲೀಸರಿಗೂ ಪ್ರಸಾದದ ರೂಪದಲ್ಲಿ ಮುಟ್ಟುತ್ತಂತೆ ಹಾಗಂತ ಠಾಣೆಯ ಸಿಬ್ಬಂದಿಗಳೇ ಮಾತಾಡಿಕೊಳ್ಳತಾರೆ.
ಒಟ್ಟಿನಲ್ಲಿ ಖಡಕ್ ಇನಸ್ಪೆಕ್ಟರ್ ಜಯಪಾಲ ಪಾಟೀಲ ಮತ್ತು ಪಿಎಸ್ಆಯ್ ಶರಣ ದೇಸಾಯಿ ಈ ಗಾಂಜಾ ದಂಧೆಗೆ ಕಡಿವಾಣ ಹಾಕ್ತಾರಾ ಕಾದು ನೋಡ ಬೇಕಾಗಿದೆ.
ನಾಳೆ ಗಾಂಜಾ ದಂಧೆಯ ಅಸಲಿಯತ್ತು ವಿಡಿಯೋ ಸಮೇತ ನಿಮ್ಮ ಉದಯ ವಾರ್ತೆಯಲ್ಲಿ ನಿರೀಕ್ಷಿಸಿ.
ಉದಯ ವಾರ್ತೆ ಹುಬ್ಬಳ್ಳಿ