ಯಾದಗಿರಿ ಶಿಕ್ಷಣ ಇಲಾಖೆಯಲ್ಲಿ ಲಂಚಾವತಾರ.
ವರ್ಗಾವಣೆಗಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಲ್ಲೇ ನಡೆದಿದೆ ಡೀಲ್..
ಯಾದಗಿರಿ:-ಯಾದಗಿರಿ ಜಿಲ್ಲೆಯ ಸುರಪುರ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಲ್ಲೇ ವರ್ಗಾವಣೆಗಾಗಿ ಕುರುಡು ಕಾಂಚಾಣದ ಸದ್ದು ಮಾಡುತ್ತಿದೆ.
ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ವರ್ಗಾವಣೆಯಾಗೋ ಶಿಕ್ಷಕರು ದುಡ್ಡು ಕೋಡಲೇಬೇಕು.
ಹೌದು ಶಿಕ್ಷಕರಿಂದ ರಾಜ ರೋಷವಾಗಿ ಹಣ ಪಡೆದುಕೊಳ್ಳುತ್ತಿರುವ ಶಿಕ್ಷಕರ ಸಂಘದ ಪದಾಧಿಕಾರಿಗಳು.ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ಲ್ ಆಗಿದೆ.ಹಣ ವಸೂಲಿ ದಂಧೆಗೆ ಬಿದ್ದ ಶಿಕ್ಷಕರ ಸಂಘದ ಪದಾಧಿಕಾರಿ ಸೋಮರೆಡ್ಡಿ ಮಂಗ್ಯಾಳ ಆ್ಯಂಡ್ ಗ್ಯಾಂಗ್
ವರ್ಗಾವಣೆಯಾದ ಶಿಕ್ಷಕರಿಂದ ಸೋಮ ರೆಡ್ಡಿ ಮಂಗ್ಯಾಳ್ ಆ್ಯಂಡ್ ಟೀಂ ಹಣ ವಸೂಲಿಗಿಳಿದರಾ ?
ಸೋಮರೆಡ್ಡಿ ಮಂಗ್ಯಾಳ್ ಆ್ಯಂಡ್ ಟೀಂ ಶಿಕ್ಷಕರಾ ಅಥವಾ ಡೀಲಿಂಗ್ ಮಾಸ್ಟರ್ಗಳಾ?
ಶಿಕ್ಷಣ ಇಲಾಖೆಯಲ್ಲಿ ಹಾಡ ಹಗಲೇ ಇಷ್ಟೆಲ್ಲಾ ನಡೆಯುತಿದ್ರು ಕಣ್ಮುಚ್ಚಿ ಕುಳಿತ ಕ್ಷೇತ್ರ ಶಿಕ್ಷಣಾಧಿಕಾರಿಗಳು.
ವರ್ಗಾವಣೆಗೊಂಡ ಶಿಕ್ಷಕರಿಂದ ಡೀಲ್ ಮಾಡಿದ ಹಣದಲ್ಲಿ ಬಿಇಓ ಹಾಗೂ ಡಿಡಿಪಿಐ ಅವರಿಗೂ ಪಾಲು ಇದೆಯಾ?
ಈ ಡೀಲ್ ಮಾಸ್ಟರ್ ಗಳು ಪ್ರತಿನಿತ್ಯ ಹಾಜರಾತಿ ಹಾಕೋದು ತಮ್ಮ ಶಾಲೆಯಲ್ಲಿ ಆದ್ರೆ ಅವರೆಲ್ಲ ಇರುವುದು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಲ್ಲಿ
ಉದಯ ವಾರ್ತೆ ಯಾದಗಿರಿ.