ರಾಜ್ಯದಲ್ಲಿನ ಹೀನ ಕೃತ್ಯಗಳನ್ನು ನಮ್ಮ ಸರ್ಕಾರ ಯಾವುದೇ ಕಾರಣಕ್ಕೂ ಸಹಿಸೋದಿಲ್ಲವೆಂದ CM. ಮಹಿಳೆಯೊಬ್ಬರ ಬೆತ್ತಲೆ ಪ್ರಕರಣ ಕುರಿತಂತೆ ಬೇಸರವ್ಯಕ್ತಪಡಿಸಿದ ನಾಡದೊರೆ.

Share to all

ರಾಜ್ಯದಲ್ಲಿನ ಹೀನ ಕೃತ್ಯಗಳನ್ನು ನಮ್ಮ ಸರ್ಕಾರ ಯಾವುದೇ ಕಾರಣಕ್ಕೂ ಸಹಿಸೋದಿಲ್ಲವೆಂದ CM. ಮಹಿಳೆಯೊಬ್ಬರ ಬೆತ್ತಲೆ ಪ್ರಕರಣ ಕುರಿತಂತೆ ಬೇಸರವ್ಯಕ್ತಪಡಿಸಿದ ನಾಡದೊರೆ.

ಬೆಳಗಾವಿ –

ಬೆಳಗಾವಿಯಲ್ಲಿ ಮಹಿಳೆಯೊಬ್ಬರನ್ನು ಬೆತ್ತಲೆಗೊಳಿಸಿ ಕಂಬಕ್ಕೆ ಕಟ್ಟಿ ಹಲ್ಲೆ ಮಾಡಿದ ಪ್ರಕರಣ ಅಮಾನವೀಯವಾ ಗಿದ್ದು ಇದರಿಂದ ಸಮಾಜವೇ ತಲೆತಗ್ಗಿಸುವಂತಾಗಿದೆ ಎಂದು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.ತಮ್ಮ “X” ಖಾತೆಯಲ್ಲಿ ಈ ಒಂದು ವಿಚಾರ ಕುರಿತಂತೆ ಉಲ್ಲೇಖ ಮಾಡಿದ ಅವರು ಮಹಿಳೆಯೊಬ್ಬರನ್ನು ಬೆತ್ತಲೆಗೊಳಿಸಿ,ಕಂಬಕ್ಕೆ ಕಟ್ಟಿಹಾಕಿ ಹಲ್ಲೆ ನಡೆಸಿರುವುದು ಅತ್ಯಂತ ಅಮಾನವೀಯವಾಗಿದ್ದು ಇದರಿಂದ ಇಡೀ ಸಮಾಜವೇ ತಲೆತಗ್ಗಿಸುವಂತಾಗಿದೆ.

ಇಂತಹ ಹೀನ ಕೃತ್ಯಗಳನ್ನು ನಮ್ಮ ಸರ್ಕಾರ ಯಾವುದೇ ಕಾರಣಕ್ಕೂ ಸಹಿಸೋದಿಲ್ಲವೆಂದಿದ್ದಾರೆ.ಪ್ರಕರಣದ ಸಂಬಂಧ ಈಗಾಗಲೇ ಹಲವರನ್ನು ಬಂಧಿಸಲಾಗಿದೆ. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗುವಂತೆ ಕ್ರಮವಹಿಸುವ ಮೂಲಕ ನೊಂದ ಕುಟುಂಬಕ್ಕೆ ನ್ಯಾಯ ಒದಗಿಸುವ ಸಂಪೂರ್ಣ ಹೊಣೆ ನಮ್ಮದು ಎಂದಿದ್ದಾರೆ.

ಉದಯ ವಾರ್ತೆ ಬೆಳಗಾವಿ.


Share to all

You May Also Like

More From Author