ಅಕ್ರಮ ಪಡಿತರ ಅಕ್ಕಿ ಬೇಟೆಯ ಹಿಂದಿನ ರೂವಾರಿ ಯಾರು..? ಸಿಸಿಬಿ ಎಂಟ್ರಿ ಕೊಟ್ಟಿದ್ದೇಕೆ ಗೊತ್ತಾ?
ಹುಬ್ಬಳ್ಳಿ: ಇತ್ತೀಚೆಗೆ ನಡೆದ ಹುಬ್ಬಳ್ಳಿಯ ನವನಗರ ಪೊಲೀಸ್ ಠಾಣೆ ವ್ಯಾಪ್ತಿಯ ಎಪಿಎಂಸಿ ಗೋದಾಮಿನ ಪಡಿತರ ಅಕ್ಕಿ ದಾಳಿಯ ಬಗ್ಗೆ ಇದೀಗ ಕಪ್ಪು ಬಿಳುಪಿನ ಮಾರುಕಟ್ಟೆಯಲ್ಲಿ ಸಾಕಷ್ಟು ಚರ್ಚೆ ನಡೆಯುತ್ತಿದೆ. ಏಕೆಂದರೆ ಅದೇ ವ್ಯಾಪ್ತಿಯಲ್ಲಿ ಇನ್ನು ಮೂರು ಪಡಿತರ ಅಕ್ಕಿ ಶೇಖರಣೆ ಮಾಡಿ ಇಟ್ಟಿರುವ ಗೋದಾಮು ಇದ್ದರೂ ಅವಳಿನಗರದ ಸಿಸಿಬಿ ಪೊಲೀಸರು ತಿರುಗಿ ನೋಡಿಲ್ಲ ಇದು ಅವರ ಕಾರ್ಯ ವೈಖರಿಯನ್ನು ಪ್ರಶ್ನಿಸುವ ರೀತಿಯಲ್ಲಿ ನಡೆದಿದೆ.
ಎಲ್ಲರಿಗೆ ಗೊತ್ತಿರುವಂತೆ ಹುಬ್ಬಳ್ಳಿಯಲ್ಲಿ ಪ್ರಮುಖ ಎರಡು ಗುಂಪುಗಳು ಪಡಿತರ ಅಕ್ಕಿಯನ್ನೂ ಅನ್ಯ ರಾಜ್ಯಗಳಿಗೆ ಎಕ್ಸ್ ಪೋರ್ಟ್ ಮಾಡುತ್ತವೆ ಇನ್ನೂ ಕೆಲವು ಸಣ್ಣ ಪುಟ್ಟ ಅಕ್ರಮ ಸರಬರಾಜುದರಾರನ್ನು ತಮ್ಮ ಕೃಪಾ ಕಟಾಕ್ಷದಿಂದ ತಮ್ಮಲ್ಲಿಯೇ ಅಕ್ಕಿಯನ್ನು ಮಾರಾಟ ಮಾಡಬೇಕು ಎನ್ನುವ ಪರ್ಮಾನ್ ಹೊರಡಿಸಿದೆ.
ವಿಶೇಷ ಎನ್ನುವಂತೆ ಈ ಎರಡು ಗುಂಪುಗಳು ಎರಡು ರಾಜಕೀಯ ಭಿನ್ನಾಭಿಪ್ರಾಯ ಇದೀಗ ಪೊಲೀಸ್ ಇಲಾಖೆ ಯನ್ನೂ ಪರೋಕ್ಷವಾಗಿ ಬಳಸಿಕೊಂಡು ತಮ್ಮ ತಮ್ಮ ಹಿತ ಕಾಪಾಡಿ ಕೊಳ್ಳುತ್ತಿದೆ ಎಂದು ಕೇಳಿ ಬಂದಿದ್ದು ಇದು ಎಸ್ಟರ ಮಟ್ಟಿಗೆ ಸತ್ಯ ಸುಳ್ಳು ಎನ್ನುವುದನ್ನು ಅವಳಿನಗರದ ಪೊಲೀಸರು ತಮ್ಮ ಕಾರ್ಯ ವೈಖರಿ ಮೂಲಕ ರುಜುವಾತು ಪಡಿಸಬೇಕಿದೆ.
ಹುಬ್ಬಳ್ಳಿಯಲ್ಲಿ ವ್ಯವಸ್ಥಿತವಾಗಿ ನಕಲಿ ದಾಖಲೆ ಸೃಷ್ಟಿಸಿ ನಡೆಸಲಾಗುತ್ತಿರುವ ಈ ಕರಾಳ ದಂಧೆ ಪೊಲೀಸರಿಗೆ ,ಆಹಾರ ಇಲಾಖೆ ಅಧಿಕಾರಿಗಳಿಗೆ ಗೊತ್ತಿದ್ದರೂ ಸುಮ್ಮನೆ ಇರುವುದು ಯಾಕೆ ಎನ್ನುವುದು ಇದುವರೆಗೂ ತಿಳಿದು ಬಂದಿಲ್ಲ ಎನ್ನುವುದು ವಿಪರ್ಯಾಸ
ಉದಯ ವಾರ್ತೆ ಹುಬ್ಬಳ್ಳಿ