ಬಡ ಕುಟುಂಬಗಳಿಗೆ ಮದುವೆ ಮಾಡಿಸಿ ಸಮಾಜಕ್ಕೆ ಮಾದರಿಯಾದ ಮಂಗಳ ಮುಖಿಯರು.ಭಿಕ್ಷಾಟನೆ ಮಾಡಿ ಸಮಾಜ ಮುಖಿ ಕೆಲಸ.
ರಾಯಚೂರ:-ಹೌದು ರಾಯಚೂರು ಜಿಲ್ಲೆಯ ಸಿಂಧನೂರು ತಾಲ್ಲೂಕಿನ ಹೊಸಹಳ್ಳಿ ಕ್ಯಾಂಪ್ ನ ದುರ್ಗಾದೇವಿ ದೇವಸ್ಥಾನ ನಡೆದ ಮದುವೆ ಕಾರ್ಯಕ್ರಮವೇ ಸಮಾಜ ಮುಖಿ ಕೆಲಸಕ್ಕೆ ಸಾಕ್ಷಿ.
ಕಳೆದ ನಾಲ್ಕು ವರ್ಷಗಳಿಂದ ಮಂಗಳ ಮುಖಿಯರ ಮುಖಂಡೆ ಮದುವೆ ಜಮುನಾ ಎಂಬ ಮಂಗಳ ಮುಖಿ ವರ್ಷವಿಡೀ ತಾನು ಭಿಕ್ಷಾಟನೆ ಮಾಡಿದ ದುಡ್ಡಿನಲ್ಲಿಯೇ ಇಂತಹ ಒಳ್ಳೆಯ ಕಾರ್ಯಕ್ರಮ ಮಾಡುತ್ತಾ ಬಂದಿದ್ದಾರೆ.
ತಾನು ಬಿಕ್ಷೆ ಬೇಡಿ ಬಡ ಜನರಿಗೊಂದು ಅನುಕೂಲ ಆಗಲಿ ಎಂದು ಪ್ರತಿ ವರ್ಷ ಮದುವೆ ಮಾಡುವ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ.ಮದುವೆ ಗೆ ಬೇಕಾದ ನವ ಜೋಡಿಗಳಿಗೆ ತಾಳಿ , ಬಟ್ಟೆ ,ಮದುವೆಗೆ ಬೇಕಾದ ಎಲ್ಲಾ ಸಾಮಾನು ಗಳು ಊಟದ ವ್ಯವಸ್ಥೆ ಮಾಡಿ ಸಮಾಜಕ್ಕೆ ಸೈ ಎನಿಸಿಕೊಂಡಿದ್ದಾರೆ.
ಸಮಾಜದಲ್ಲಿ ಎಲ್ಲರನ್ನೂ ಸಮಾನವಾಗಿ ಕಾಣಿ.ನಿಮ್ಮ ಕೈಲಾದ ಸಹಾಯವನ್ನು ಬಡ ಜನರಿಗೆ ಮಾಡಿ ಎಂದು ಕೈ ಮುಗಿದು ಮಂಗಳ ಮುಖಿ ಜಮುನಾ ಮನವಿ ಮಾಡಿದ್ದಾಳೆ.
ಉದಯ ವಾರ್ತೆ ರಾಯಚೂರ.