ಮುಖ್ಯಮಂತ್ರಿಗೆ ತಮ್ಮದೇ ಕಲಾಕೃತಿ ಉಡುಗೊರೆ ನೀಡಿದ:ರಜತ್ ಉಳ್ಳಾಗಡ್ಡಿಮಠ ತಮ್ಮದೇ ಕಲಾಕೃತಿ ನೋಡಿ ಹರ್ಷವ್ಯಕ್ತಪಡಿಸಿದ ಸಿಎಂ.
ಹುಬ್ಬಳ್ಳಿ: ವಿವಿಧ ಕಾರ್ಯಕ್ರಮಗಳಿಗೆ ಹುಬ್ಬಳ್ಳಿಗೆ ಆಗಮಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಇಂದು ಖಾಸಗಿ ಹೋಟೆಲ್ ನಲ್ಲಿ ಬೇಟಿ ಮಾಡಿದ ಕಾಂಗ್ರೆಸ್ ಮುಖಂಡ ರಜತ್ ಉಳ್ಳಾಗಡ್ಡಿಮಠ ಸಿಎಂ ಸಿದ್ದರಾಮಯ್ಯ ಅವರಿಗೆ ಮೈಸೂರು ಸ್ಯಾಂಡಲ್ ಸೋಪ್ ನಿಂದ ಮಾಡಿದ ವಿಶೇಷ ಉಡುಗೊರೆ ನೀಡಿ ಸನ್ಮಾನಿಸಿದರು.ಈ ವೇಳೆ ತಮ್ಮದೆ ಕಲಾಕೃತಿ ನೋಡಿದ ಸಿಎಂ ಸಿದ್ದು ಹರ್ಷ ವ್ಯಕ್ತ ಪಡಿಸಿದರು.
ಕಲಾವಿದ ಬಸವರಾಜ ಜಿಗಜಿನ್ನಿ ಅವರ ಕಡೆಯಿಂದ ಮೈಸೂರ್ ಸ್ಯಾಂಡಲ್ ಸೋಪ್ ನಲ್ಲಿ ಸಿದ್ದರಾಮಯ್ಯ ಅವರ ಕಲಾಕೃತಿಯನ್ನು ರಜತ್ ಉಳ್ಳಾಗಡ್ಡಿಮಠ ತಯಾರು ಮಾಡಿಸಿ ಇಂದು ಉಡುಗರೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಉಸ್ತುವಾರಿ ಸಚಿವ ಸಂತೋಷ್ ಲಾಡ್,ಉದ್ಯಮಿ ಇರ್ಫಾನ್ ಖಾನ್, ಉಭಯ ಜಿಲ್ಲಾಧ್ಯಕ್ಷರಾದ ಅನಿಲ್ ಕುಮಾರ್ ಪಾಟೀಲ್, ಅಲ್ತಾಫ್ ಹಳ್ಳೂರ ಉಪಸ್ಥಿತಿರದ್ದರು.
ಇನ್ನು ರಾಜ್ಯ ಸರ್ಕಾರಿ ಸ್ವಾಮ್ಯದ ಕರ್ನಾಟಕ ಸೋಪು ಮತ್ತು ಮಾರ್ಜಕ ನಿಯಮಿತ (ಕೆಎಸ್ಡಿಎಲ್) ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಗಮನಾರ್ಹ ಪ್ರಗತಿ ಸಾಧಿಸಿದೆ. ಮೈಸೂರು ಸ್ಯಾಂಡಲ್ ಎಂದೇ ಜನಮಾನಸದಲ್ಲಿ ಸದಾ ಹೆಸರು ಪಡೆದಿರುವ ಈ ಕಾರ್ಖಾನೆ ಐತಿಹಾಸಿಕ ವಹಿವಾಟನ್ನು ಈ ಬಾರಿ ಮಾಡಿದೆ.
ಉದಯ ವಾರ್ತೆ ಹುಬ್ಬಳ್ಳಿ