ನನ್ನ ತಂಟೆಗೆ ಬಂದ್ರೆ ಸುಮ್ಮನೆ ಬಿಡಲ್ಲ.
ವಿರೋಧಿಗಳಿಗೆ ವಾರ್ನ್ ಮಾಡಿದ ಮಾಜಿ ಸಿಎಂ.
ಹುಬ್ಬಳ್ಳಿ:-ಸರಳ,ಸಜ್ಜನಿಕೆಗೆ ಹೆಸರಾದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ತಮ್ಮ ವಿರೋಧಿಗಳ ವಿರುದ್ಧ ಗುಡುಗಿದ್ದಾರೆ.ನನ್ನ ತಂಟೆಗೆ ಬಂದರೆ ಬಿಡಲ್ಲ.ಈಗಾಗಲೇ ನನ್ನ ತಂಟೆಗೆ ಬಂದವರಿಗೆ ತಕ್ಕ ಉತ್ತರವನ್ನು ಕೊಟ್ಟಿದ್ದೇನೆ ಎಂದು ಗುಡುಗಿದ್ದಾರೆ.
ನಿನ್ನೆ ಸವಾಯಿ ಗಂಧರ್ವ ಹಾಲನಲ್ಲಿ ತಮ್ಮ 68 ನೇ ಹುಟ್ಟು ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಹೇಳಿದ ಶೆಟ್ಟರ
ಕಳೆದ ವರ್ಷವೂ ನಾನು ಇದೇ ಮಾತು ಹೇಳಿದ್ದೆ.ಅದಕ್ಕೆ ತಕ್ಕ ಉತ್ತರವನ್ನೂ ನೀಡಿದ್ದೇವೆ.
ನಾನು ವಿಧಾನಸಭೆ ಚುನಾವಣೆಯಲ್ಲಿ ಸೋತಿರಬಹುದು
ಆದ್ರೆ ಆರು ಬಾರಿ ನನ್ನನ್ನು ಜನ ಗೆಲ್ಲಿಸದ್ದನ್ನ ಮರೆಯಲ್ಲ.
ನಾನು ಸೋತರೂ ಉತ್ತರ ಕರ್ನಾಟಕದಲ್ಲಿ ಹೆಚ್ಚಿನ ಸೀಟು ಗೆಲ್ಲಿಸಿದ್ದೇವೆ.ನನ್ನ ಉಸಾಬರಿಗೆ ಬಂದವರಿಗೆ ತಕ್ಕ ಉತ್ತರ ಕೊಟ್ಟಿದ್ದೇನೆ.ಮುಂದೆಯೂ ನನ್ನ ಉಸಾಬರಿಗೆ ಬಂದವರಿಗೆ ಸುಮ್ಮನೆ ಬಿಡಲ್ಲ ಎಂದು ಶೆಟ್ಟರ ಎಚ್ಚರಿಕೆ ಕೊಟ್ಟಿದ್ದಾರೆ.
ಉದಯ ವಾರ್ತೆ ಹುಬ್ಬಳ್ಳಿ