ಮಗನ ವಯಸ್ಸಿನ ವಿದ್ಯಾರ್ಥಿ ಜೊತೆ ಶಿಕ್ಷಕಿಯ ಚಕ್ಕಂದ.ಮುತ್ತು ಕೊಟ್ಟ ಶಿಕ್ಷಕಿ ಸಸ್ಪೆಂಡ್.
ಚಿಕ್ಕಬಳ್ಳಾಪುರ:-ಚಿಕ್ಕವಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಮುರುಗಲ್ ಸರ್ಕಾರಿ ಪ್ರೌಢ ಶಾಲೆಯ ಮುಖ್ಯ ಶಿಕ್ಷಕಿ ಪುಷ್ಪ ಲತಾ ಅಸಬ್ಯವಾಗಿ ವರ್ತಿಸಿದ ಪೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಹಿನ್ನೆಲೆಯಲ್ಲಿ ಶಿಕ್ಷಕಿಯನ್ನು ಅಮಾನತ್ತು ಮಾಡಿ ಬಿಇಓ ಆದೇಶ ಹೊರಡಿಸಿದ್ದಾರೆ.
ಪ್ರೌಢ ಶಾಲೆಯ ಶಿಕ್ಷಕಿ ಪುಷ್ಪಲತಾ ಎರಡು ದಿನ ವಿದ್ಯಾರ್ಥಿಗಳನ್ನು ಪ್ರವಾಸಕ್ಕೆ ಕರೆದುಕೊಂಡು ಹೋದಾಗ ಮಗನ ವಯಸ್ಸಿನ ವಿದ್ಯಾರ್ಥಿಯೊಂದಿಗೆ ಕಿಸ್ ಕೊಟ್ಟು ಅವನಿಂದ ಕಿಸ್ ಕೊಡಿಸಿಕೊಂಡು ಡ್ಯಾನ್ಸ್ ಮಾಡಿದ ಪೋಟೋಗಳು ವೈರಲ್ ಆಗಿದ್ದವು.
ಶಿಕ್ಷಕಿಯ ಆ ವರ್ತನೆಗೆ ಇಡೀ ಶಿಕ್ಷಕ ಸಮುದಾಯ ಆಕ್ರೋಶ ವ್ಯಕ್ತಪಡಿಸಿದ್ದಲ್ಲದೇ ಶಿಕ್ಷಕಿ ಮೇಲೆ ಸೂಕ್ತಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯ ಮಾಡಿದ್ದರು.ಅಲ್ಲದೇ ವಿದ್ಯಾರ್ಥಿ ಪೋಷಕರು ಕೂಡಾ ಶಿಕ್ಷಕಿಯ ವರ್ತನೆಯನ್ನು ಖಂಡಿಸಿದ ಹಿನ್ನೆಲೆ ಸಸ್ಪೆಂಡ್ ಮಾಡಲಾಗಿದೆ.
ಉದಯ ವಾರ್ತೆ ಚಿಕ್ಕಬಳ್ಳಾಪುರ.