ಪೋಲೀಸರು ಸನ್ ಪ್ಲವರ್ ಹೂವು ಇದ್ದಂಗೆ ಸರಕಾರ ಬಂದ ಕಡೆ ಹೊರಳಿ ಬಿಡತಾರೆ.ಕೇಂದ್ರ ಸಚಿವ ಪ್ರಲ್ಹಾದ ಜೋಶಿ..
ಹುಬ್ಬಳ್ಳಿ: ರಾಜ್ಯ ಕಾಂಗ್ರೆಸ್ ಸರ್ಕಾರ 31 ವರ್ಷಗಳ ಹಿಂದೆ ಹುಬ್ಬಳ್ಳಿಯಲ್ಲಿ ನಡೆದ ರಾಮಜನ್ಮಭೂಮಿ ಹೋರಾಟದಲ್ಲಿ ಭಾಗಿಯಾದವರನ್ನು ಬಂಧಿಸುವ ಮೂಲಕ ನೀಚತನದ ಕೆಲಸಕ್ಕೆ ಇಳಿದಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕಿಡಿಕಾರಿದ್ದಾರೆ.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಆದರೆ ಸಿದ್ದರಾಮಯ್ಯ ಅವರಿಗೆ ಯಾಕೆ ಹೊಟ್ಟೆ ಕಿಚ್ಚು, ಒಂದು ಕಡೆಗೆ ಕಾಂಗ್ರೆಸ್ ಸರ್ಕಾರ ದೇಶದ್ರೋಹಿಗಳನ್ನು ಬಿಡುಗಡೆಗೊಳಿಸಲು ಪತ್ರ ಬರೆಯುತ್ತಾರೆ. ಅದೇ ಹಿಂದೂ ಕಾರ್ಯಕರ್ತರನ್ನು ಬಂಧಿಸಲು ಕುಮ್ಮಕ್ಕು ನೀಡುತ್ತಾರೆಂದು ಹರಿಹಾಯ್ದರು.
ಸಿದ್ದರಾಮಯ್ಯ ಅವರು ತಮ್ಮ ಮನಸ್ಸಿಗೆ ಬಂದ ಹಾಗೇ ಆಡಳಿತ ನಡೆಸಲು ತಮ್ಮದು ಐಎಸ್ಐ ಸರ್ಕಾರ ಎಂದು ತಿಳಿದುಕೊಂಡಿದ್ದಾರೆ. ಇದು ಮುಸ್ಲಿಂ ತುಷ್ಟಿಕರಣ ಪರಾಕಾಷ್ಠೆ, ದ್ವೇಷ ಅಸುಯೇ ರಾಜಕಾರಣ ರಾಜ್ಯದಲ್ಲಿ ನಡೆಯುತ್ತಿದೆ ಎಂದು ಆರೋಪಿಸಿದರು.
ಬರುವ ದಿನಗಳಲ್ಲಿ ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ಆಗುತ್ತಿದೆ. ಈ ಮಧ್ಯೆ ಮಂದಿರ ನಿರ್ಮಾಣಕ್ಕೆ ಹೋರಾಟ ಮಾಡಿದವರನ್ನು ಬಂಧಿಸುವ ಕೆಲಸಕ್ಕೆ ಸರ್ಕಾರ ಮುಂದಾಗುತ್ತಿದೆ. ಕಾಂಗ್ರೆಸ್ ಪಕ್ಷದಲ್ಲಿಯೇ ಕಳ್ಳರು ಇದ್ದಾರೆ. ಮೊದಲು ಅವರನ್ನು ಹಿಡಿದು ಒಳಗಡೆ ಹಾಕಲಿ, ಅದು ಬಿಟ್ಟು ಮುಸ್ಲಿಂರ ಮೇಲಿನ ಪ್ರೀತಿಯಿಂದ ಈ ರೀತಿ ಮಾಡುವುದು ಸರಿಯಲ್ಲ ಪೋಲೀಸರು ಸನ್ ಫ್ಲವರ್ ಇದ್ದ ಹಾಗೆ ಬಿಸಿಲು ಬಂದ ಕಡೆ ಸನ್ ಪ್ಲವರ್ ಹೊಳ್ಳದಂದ ಸರಕಾರ ಬಂದ ಕಡೆ ಹೊಳ್ಲತಾರೆ ಎಂದರು. ಶೀಘ್ರ ಹೋರಾಟದಲ್ಲಿ ಭಾಗಿಯಾದವರಿಗೆ ಜಾಮೀನು ಮಂಜೂರು ಆಗುವವರೆಗೆ ಬಿಜೆಪಿ ಪಕ್ಷದಿಂದ ನಿರಂತರ ಹೋರಾಟ ಮಾಡಲಾಗುವುದು ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಶಾಸಕ ಅರವಿಂದ ಬೆಲ್ಲದ, ಮುಖಂಡರಾದ ನಾಗರಾಜ ಛಬ್ಬಿ, ಜಿಲ್ಲಾಧ್ಯಕ್ಷ ಸಂಜಯ ಕಪಟಕರ ಇದ್ದರು.
ಉದಯ ವಾರ್ತೆ ಹುಬ್ಬಳ್ಳಿ