ರಾಮಜನ್ಮಭೂಮಿ ಹೋರಾಟಗಾರ ಶ್ರೀಕಾಂತ್ ಪೂಜಾರಿ ಬಂಧನ ಕೇಸ್..
ನಾಳೆ ಶ್ರೀಕಾಂತ್ ಪೂಜಾರಿ ಮನೆಗೆ ಭೇಟಿ ನೀಡಲಿರೋ ಪ್ರಮೋದ್ ಮುತಾಲಿಕ್.
ಹುಬ್ಬಳ್ಳಿ:-ಶ್ರೀಕಾಂತ ಪೂಜಾರಿ ಬಂಧನ ಪ್ರಕರಣ ರಾಜಕೀಕರಣಗೊಳ್ಳುತ್ತಿದೆ.ಇಂದು ರಾಜ್ಯಾದ್ಯಂತ ಪ್ರತಿಭಟನೆಗೆ ಬಿಜೆಪಿ ರಾಜ್ಯಾದ್ಯಕ್ಷರು ಕರೆ ಕೊಟ್ಟ ಹಿನ್ನೆಲೆಯಲ್ಲಿ ಹುಬ್ಬಳ್ಳಿಯಲ್ಲಿ ಪ್ರತಿಪಕ್ಷದ ನಾಯಕ ಆರ್ ಅಶೋಕ ನೇತ್ರತ್ವದಲ್ಲಿ ಪ್ರತಿಭಟನೆ ನಡೆಯಿತು.
ನಾಳೆ 11 ಗಂಟೆಗೆ ಶ್ರೀಕಾಂತ್ ಪೂಜಾರ ಮನೆಗೆ ಪ್ರಮೋದ ಮುತಾಲಿಕ್ ಭೇಟಿ ನೀಡಲಿದ್ದಾರೆ.ಹುಬ್ಬಳ್ಳಿಯ ಚನ್ನಪೇಟೆ ಬಳಿ ಇರೋ ಶ್ರೀಕಾಂತ್ ನಿವಾಸಕ್ಕೆ ಭೇಟಿ ನೀಡಲಿದ್ದಾರೆ.
ಮತ್ತೊಂದು ಕಡೆ ಕಾಂಗ್ರೆಸ್ ನಿಂದಲೂ ಹೋರಾಟದ ರೂಪರೇಶ ಸಿದ್ದವಾಗಿದ್ದು
ಇಂದು ಪ್ರತಿಭಟನೆ ವೇಳೆ ಸಿಎಂ ಸಿದ್ದರಾಮಯ್ಯ
ವಿರುದ್ಧಅವಹೇಳನಕಾರಿಯಾಗಿ ಮಾತನಾಡಿದವರ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹಿಸಿ ಮಹಿಳಾ ಕಾಂಗ್ರೆಸ್ ವತಿಯಿಂದ ಪಾಲಿಕೆ ವಿಪಕ್ಷ ನಾಯಕಿ ಸುವರ್ಣ ಕಲ್ಲಕುಂಟ್ಲಾ ಮತ್ತು ಮಹಿಳಾ ಘಟಕದ ಅಧ್ಯಕ್ಷೆ ದೀಪಾ ಗೌರಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯಲಿದೆ.
ಒಟ್ಟಿನಲ್ಲಿ ಶ್ರೀಕಾಂತ ಪೂಜಾರಿ ಬಂಧನ ಪ್ರಕರಣ ರಾಜಕೀಯ ತಿರುವ ಪಡೆದುಕೊಳ್ಳತಾ ಇದೆ.
ಉದಯ ವಾರ್ತೆ ಹುಬ್ಬಳ್ಳಿ