ಶ್ರೀಕಾಂತ್ ಪೂಜಾರಿ ಒಬ್ಬ ರೌಡಿ ಶೀಟರ್, ಕ್ರೀಮಿನಲ್.ಶಾಸಕ ಪ್ರಸಾದ ಅಬ್ಬಯ್ಯ.

Share to all

ಶ್ರೀಕಾಂತ್ ಪೂಜಾರಿ ಒಬ್ಬ ರೌಡಿ ಶೀಟರ್, ಕ್ರೀಮಿನಲ್.ಶಾಸಕ ಪ್ರಸಾದ ಅಬ್ಬಯ್ಯ.

ಹುಬ್ಬಳ್ಳಿ:-ಪೋಲೀಸರಿಂದ ಬಂಧಿಸಲ್ಪಟ್ಟಿರುವ ಶ್ರೀಕಾಂತ ಪೂಜಾರಿ ಅವನೊಬ್ಬ ಕ್ರಿಮಿನಲ್,ರೌಡಿ ಶೀಟರ್ ಎಂದು ಶಾಸಕ ಪ್ರಸಾದ ಅಬ್ಬಯ್ಯ ಹೇಳಿದ್ದಾರೆ.

ಶ್ರೀಕಾಂತ ಪೂಜಾರಿ ಹಿನ್ನೆಲೆ ತಗೆದಾಗ ಅವನ ಮೇಲೆ 16 ಕೇಸ್ ಇವೆ..ಜನ ಛೀಮಾರಿ ಹಾಕತೀದಾರೆ.ಇದು ದೇಶ ಮಟ್ಟದಲ್ಲಿ ಸುದ್ದಿಯಾಗ್ತಿದೆ.
ರಾಜ್ಯದ ಉದ್ದಗಲಕ್ಕೂ ಇದು ಚರ್ಚೆಯಾಗ್ತಿದೆ.ಯಾವ ಪುರುಷಾರ್ಥಕ್ಕೆ ಬಿಜೆಪಿ ಹೋರಾಟ ಎಂದು ಶಾಸಕ ಪ್ರಸಾದ್ ಅಬ್ಬಯ್ಯ ಕಿಡಿಕಾರಿದ್ದಾರೆ.

ನಿನ್ನೆ ಆರ್ ಅಶೋಕ ಬಂದು ಹೋರಾಟ ಮಾಡಿದ್ರು
ಮತ್ತೆ ವಿಜಯೇಂದ್ರ ಬಂದು ಹೋರಾಟ ಮಾಡ್ತಾರಂತೆ..
ಇವರ ಹೋರಾಟ ಯಾವ ಪುರುಷಾರ್ಥಕ್ಕೆ.ನಿಮ್ಮ ಅಜೆಂಡಾ ಹೇಳಬೇಡಿ.
ರೌಡಿ ಶೀಟರ್ ಕ್ರೀಮಿನಲ್ ಹಿನ್ನೆಲೆ ಇದ್ದವರು ನಿಮ್ಮ ಪಕ್ಷದ ಪಿಲ್ಲರ್ ಗಳಾ.ನೀವ ಇವರೇ ನಮ್ಮ ಪಿಲ್ಲರ್ ಗಳು ಅಂತಾ ತೋರಸೋಕೆ ಬರ್ತೀದೀರಾ.

ರಾಮನ ಭಕ್ತರು ಸರಾಯಿ ಮರ್ತಾರಾ.ಮಟ್ಕಾ ಜೂಜಾಟ ಆಡೋನು ರಾಮ ಭಕ್ತನಾ. ರಾಮನ ವಿಚಾರಗಳನ್ನು ತಿರಚೋ ಕೆಲಸ ದೇಶದಲ್ಲಿ ಆಗ್ತಿದೆ.ಎಲ್ಲ ಜಾತಿಗಳನ್ನ ಒಳಗೊಂಡ ದೇಶ ಇದು.
ಇವತ್ತು ದಲಿತರ ಊರನ್ನು ಹೊರಗಡೆ ಇಡೋ ಕೆಲಸ ಆಗಿದೆ.ಇವರಿಗೆ ಧೈರ್ಯ ಇದ್ರೆ ಅಲ್ಲಿಗೆ ಹೋಗಿ ಪ್ರತಿಭಟನೆ ಮಾಡಲಿ ಎಂದು ಸವಾಲ್ ಹಾಕಿದ ಅಬ್ಬಯ್ಯ.

ಜನ ಇವತ್ತು ನಿರ್ದಾರ ಮಾಡಬೇಕು ಎಂತಹ ವ್ಯಕ್ತಿ ಪರ ಪ್ರತಿಭಟನೆ ಮಾಡ್ತೀದಾರೆ ಅನ್ನೋದು.ಇದು ಕೋರ್ಟ್ ಆರ್ಡರ್ ಇದೆ ಹಾಗಾಗಿ ಬಂಧನ ಮಾಡಿದ್ದಾರೆ.
ಇವತ್ತು ರಾಮ ರಾಜ್ಯ ಬಿಟ್ಟು ರಾವನ ರಾಜ್ಯ ಬೇಕಾಗಿದೆ ಎಂದ ಅಬ್ಬಯ್ಯ.ಹಿಂದೂ ಧರ್ಮ ಅನ್ನೋದು ಬೇರೆ ಧರ್ಮವನ್ನು ಗೌರವದಿಂದ ಕಾಣೋದು ಅದರ ತತ್ವ.ಆದ್ರೆ ಇವರು ಇದೇ ವಿಚಾರದಿಂದ ದೇಶ ಒಡೆಯೋ ಕೆಲಸ ಮಾಡೀದಾರೆ.

ಶಹರ ಠಾಣೆ ಪೊಲೀಸ್ ಇನ್ಸಪೆಕ್ಟರ್ ಮಹಮ್ಮದ್ ರಫೀಕ್ ಅವರನ್ನು ಅಮಾನತ್ತು ಮಾಡೋ ಪ್ರಶ್ನೆ ‌ಇಲ್ಲ
ಅವರೊಬ್ಬ ಖಡಕ್ ಅಧಿಕಾರಿ
ರೌಡಿ ಶೀಟರ್ ಗಳಿಗೆ ಅಧಿಕಾರಿ ನಡುಕ ಹುಟ್ಟಿಸಿದ್ದಾರೆ.
ಶಹರ ಠಾಣೆ ಇನ್ಸಪೆಕ್ಟರ್ ಪರ ಶಾಸಕರ ಬ್ಯಾಟಿಂಗ್ ಬೀಸಿದ್ದಾರೆ.
ರಜೆ ಹಾಕಿ ಹೋಗಿದ್ದಾರೆ ಅವರನ್ನು ತಗೆಯೋ ಪ್ರಶ್ನೆ ಬರಲ್ಲ.ಪೊಲೀಸರು ಮಾಡೋ ಕೆಲಸಕ್ಕೆ ಆತ್ಮಸ್ಥೈರ್ಯ ಕುಂದಿಸೋ ಕೆಲಸ ಆಗಬಾರದು ಎಂದ ಅಬ್ಬಯ್ಯ ಹೇಳಿದ್ದಾರೆ.

ಉದಯ ವಾರ್ತೆ ಹುಬ್ಬಳ್ಳಿ.


Share to all

You May Also Like

More From Author