ಕರಸೇವಕನ ರಿಲೀಸ್ ಗೆ ಕ್ಷಣಗಣನೆ.ಕಾರಾಗೃಹದತ್ತ ರಾಮ ಭಕ್ತರು.
ಹುಬ್ಬಳ್ಳಿ: ರಾಮ ಜನ್ಮಭೂಮಿ ಹೋರಾಟದ ಪ್ರಕರಣದಲ್ಲಿ ಬಂಧಿತನಾಗಿದ್ದ ಶ್ರೀಕಾಂತ್ ಪೂಜಾರಿ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದೆ. ಇನ್ನೂ ಕೆಲವೇ ಗಂಟೆಗಳಲ್ಲಿ ಬಂಧಿತ ಶ್ರೀಕಾಂತ ಪೂಜಾರಿ ಜೈಲಿನಿಂದ ಬಿಡುಗಡೆಯಾಗಲಿದ್ದಾರೆ.
ಶ್ರೀಕಾಂತ ಪೂಜಾರಿಯನ್ನ ಎದುರು ನೋಡುತ್ತಿರುವ ಕುಟುಂಬಸ್ಥರಿಗೆ ಖುಷಿಯ ಕ್ಷಣಗಳು ಎದುರಾಗಲಿವೆ. ಐದು ಗಂಟೆಗೆ ಜೈಲಿನಿಂದ ಶ್ರೀಕಾಂತನಿಗೆ ಮುಕ್ತಿ ಸಿಗಲಿದೆ.
ಕಳೆದ 29 ಜೈಲು ಸೇರಿದ್ದ ಶ್ರೀರಾಮ ಜನ್ಮ ಭೂಮಿ ಹೋರಾಟಗಾರನಿಗೆ ನಿನ್ನೆ ಜಾಮೀನು ಸಿಕ್ಕಿದೆ. ಇನ್ನೂ ಕೆಲವೇ ಕ್ಷಣಗಳಲ್ಲಿ ವಕೀಲರ ಕೈಸೇರಲಿದೆ ಜಾಮೀನು ತೀರ್ಪಿನ ಆದೇಶ ಕೈಗೆ ಸಿಗುತ್ತಿದಂತೆ ಸಬ್‌ಜೈಲ್ ಕಡೆ ಬರಲಿರುವ ವಕೀಲರು, ಜೈಲಾಧಿಕಾರಿಗಳಿಗೆ ತೀರ್ಪು ಆದೇಶ ನೀಡಿ ಎಲ್ಲಾ ಪ್ರಕ್ರಿಯೆಗಳನ್ನ ಮುಗಿಸಿದ ನಂತರ ಜೈಲಿನಿಂದ ಶ್ರೀಕಾಂತ ಪೂಜಾರಿ ರಿಲೀಸ್ ಆಗಲಿದ್ದಾರೆ.
ಉದಯ ವಾರ್ತೆ ಹುಬ್ಬಳ್ಳಿ