!!!ವಿಜಯಪುರದಲ್ಲೊಬ್ಬನ ಡಿಫರಂಟ್ ಸುಸೈಡ್. ತನ್ನನ್ನೇ ತಾನು ಪೂಜಿಸಿಕೊಂಡು ನೇಣಿಗೆ ಶರಣು.!!!
ವಿಜಯಪುರ:-ಜೀವನದಲ್ಲಿ ಜಿಗುಪ್ಸೆಗೊಂಡರೆ ವಿಷ ಸೇವಿಸಿಯೋ ಹ್ಯಾಂಗಿಂಗ್ ಮಾಡಿಕೊಂಡೋ ಕರೆಗೆ ಹಾರಿ ಸುಸೈಡ್ ಮಾಡಿಕೊಳ್ಳತಾರೆ.ಆದರೆ ಇಲ್ಲೊಬ್ಬ ಡಿಫರೆಂಟ್ ಸುಸೈಡ್ ಮಾಡಿಕೊಂಡ ಘಟನೆ ವಿಜಯಪುರದಲ್ಲಿ ನಡೆದಿದೆ.
ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಕೆಡಿ ಗ್ರಾಮದ ಅಡಿವೆಪ್ಪ ಅನ್ನೋ ವ್ಯಕ್ತಿ ಅಂಜುಟಗಿ ಗ್ರಾಮದ ಹೊರವಲಯದ ಜಮೀನೊಂದರಲ್ಲಿ ಎರಡು ಕೈಗಳಿಗೆ ಮತ್ತು ಕೊರಳಿಗೆ ಲಿಂಬೆ ಹಣ್ಣು ಕಟ್ಟಿಕೊಂಡು ಕಂಬಳಿ ಹಾಸಿ ಅಕ್ಕಿಯಿಂದ ಮಂಡಳ ಹಾಕಿಕೊಂಡು ಪೂಜೆ ಮಾಡಿಕೊಂಡು ಬೇವಿನ ಮರಕ್ಕೆ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾನೆ.
ಆತ್ಮಹತ್ಯೆಗೆ ಆಸ್ತಿ ಮಾರಾಟ ಮಾಡಿ ಬಂದ ಹಣದಿಂದ ದುಶ್ಚಟಗಳಿಗೆ ಬಲಿಯಾಗಿ ಮಾನಸಿಕವಾಗಿ ಅಘಾತಗೊಂಡಿದ್ದನಂತೆ ಹೀಗಾಗಿ ಸುಸೈಡ್ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಝಳಕಿ ಪೋಲೀಸ ಠಾಣೆಯ ಪೋಲೀಸರು ತನಿಖೆ ನಡೆಸಿದ್ದಾರೆ..
ಉದಯ ವಾರ್ತೆ ವಿಜಯಪುರ