ನಕಲಿ ವೈಧ್ಯನಿಗೆ ಬೆವರಿಳಿಸಿದ ಸಚಿವ ಸಂತೋಷ ಲಾಡ್ – PUC ಪಾಸ್ ಆದವನನ್ನು ಡಾಕ್ಟರ್ ಮಾಡಿ ಎಂದ ಕೈ ಮುಖಂಡನಿಗೂ ನೀರಿಳಿಸಿದ ಸಂತೋಷ ಲಾಡ್

Share to all

ನಕಲಿ ವೈಧ್ಯನಿಗೆ ಬೆವರಿಳಿಸ ಸಚಿವ ಸಂತೋಷ ಲಾಡ್ – PUC ಪಾಸ್ ಆದವನನ್ನು ಡಾಕ್ಟರ್ ಮಾಡಿ ಎಂದ ಕೈ ಮುಖಂಡನಿಗೂ ನೀರಿಳಿಸಿದ ಸಂತೋಷ ಲಾಡ್…….

ಧಾರವಾಡ:-ಯಾವುದೇ ಅಕ್ರಮಕ್ಕೆ ಸಚಿವ ಸಂತೋಷ ಲಾಡ್ ಯಾವಾಗಲೂ ಅವಕಾಶ ನೀಡೊದಿಲ್ಲ ಎಂಬೊಂದಕ್ಕೆ ಧಾರವಾಡದಲ್ಲಿ ಕಂಡು ಬಂದ ಈ ಒಂದು ಘಟನೆ ಸಾಕ್ಷಿಯಾಗಿದೆ.

ಹೌದು ನಗರದ ಪ್ರವಾಸಿ ಮಂದಿರದಲ್ಲಿ ಸ್ಥಳೀಯ ಕಾಂಗ್ರೆಸ್ ಪಕ್ಷದ ಮುಖಂಡರೊಬ್ಬರು ಪಿಯುಸಿ ಓದಿದ ವ್ಯಕ್ತಿಯೊಬ್ಬರು ಆಸ್ಪತ್ರೆ ನಡೆಸುತ್ತಿದ್ದರು ಆರೋಗ್ಯ ಇಲಾಖೆಯ ಸಚಿವರ ಸೂಚನೆ ಯಂತೆ ಈ ಒಂದು ಕ್ಲಿನಿಕ್ ನ್ನು ಸಧ್ಯ ಸೀಜ್ ಮಾಡಲಾಗಿದೆ.ಹೀಗಿರುವಾಗ ಈ ಒಂದು ವಿಚಾರ ಕುರಿತು ಡಾಕ್ಟರ್ ರೊಂದಿಗೆ ಸಚಿವ ಸಂತೋಷ ಲಾಡ್ ಬಳಿ ಬಂದು ಸಮಸ್ಯೆ ಹೇಳಿಕೊಳ್ಳುತ್ತಿದ್ದಂತೆ ಗರಂ ಆದ ಸಚಿವರು ನಕಲಿ ವೈದ್ಯನಿಗೆ ಬೆವರಿಳಿಸಿದರು.

ನಕಲಿ ವೈದ್ಯ ತರುಣಕುಮಾರ ರಾಯ್ ಮೇಲೆ ಸಚಿವರು ಕೆಂಡಾಮಂಡಲ ಆದರು.ಸೀಜ್ ಆಗಿರುವ ಕ್ಲಿನಿಕ್ ಓಪನ್ ಮಾಡಿಸಿಕೊಂಡುವಂತೆ ಮನವಿ ಮಾಡುತ್ತಿದ್ದಂತೆ ಹಿಗ್ಗಾ ಮುಗ್ಗಾ ತರಾಟೆಗೆ ತೆಗೆದುಕೊಂಡರು ಓಪನ್ ಮಾಡಿಸಿಕೊಡುವಂತೆ ತರುಣಕುಮಾರ ಮನವಿ ಮಾಡಿದರು.ಸಚಿವರ ಬಳಿ ತರುಣಕುಮಾರರನ್ನನ್ನು ಕರೆದುಕೊಂಡು ಬಂದಿದ್ದ ಮುತ್ತುರಾಜ್ ಮಾಖಡವಾಲೆ ಅವರನ್ನು ಕೂಡಾ ತರಾಟೆಗೆ ತೆಗೆದುಕೊಂಡಿದ್ದು ಕಂಡು ಬಂದಿತು.ಮುತ್ತುರಾಜ್ ಮಾಖಡವಾಲೆ ಕಾಂಗ್ರೆಸ್ ಮುಖಂಡರಾಗಿದ್ದು ನಿಮಗೂ ಗೊತ್ತಾಗೊದಿಲ್ವಾ ಎಂದರು.ಕಳೆದ ಕೆಲ ದಿನಗಳ ಹಿಂದೆ ತರುಣಕುಮಾರ್ ರಾಯ್ ಕ್ಲಿನಿಕ್ ಸೀಜ್ ಮಾಡಿದ್ದರು.ತಾಲೂಕಾ ವೈದ್ಯಾಧಿಕಾರಿಯಿಂದ ನಕಲಿ ಕ್ಲಿನಿಕ್ ಮೇಲೆ ದಾಳಿಯಾಗಿತ್ತು‌ 30 ವರ್ಷಗಳಿಂದ ಕ್ಲಿನಿಕ್ ನಡೆಸುತ್ತಿದ್ದ ತರುಣಕುಮಾರ್ ರಾಯ್.ಫೈಲ್ಸ್ ಫಿಶರ್ ಪಿಸ್ತೂಲ್ ಖಾಯಿಲೆಗಳಿಗೆ ಚಿಕಿತ್ಸೆ ನೀಡುತ್ತಿದ್ದರು.ಆಂದ್ರಮೂಲದ ತರುಣಕುಮಾರ ರಾಯ್ ಧಾರವಾಡದ ಬೂಸಪ್ಪ ಚೌಕ್ ನಲ್ಲಿ ಅನಧಿಕೃತ ಕ್ಲಿನಿಕ್ ನಲ್ಲಿ‌ ಚಿಕಿತ್ಸೆ ನೀಡುತ್ತಿದ್ದಾರೆ.ಸೀಜ್ ಆದ ಕ್ಲಿನಿಕ್ ಓಪನ್ ಮಾಡಿಸಿಕೊಡುಂತೆ ಸಚಿವರಿಗೆ ಮನವಿ ಮಾಡುತ್ತಿದ್ದಂತೆ ಇಬ್ಬರನ್ನೂ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ ಸಚಿವ್ ಲಾಡ್.ರಿಜಿಸ್ಟ್ರೇಷನ್ ಇಲ್ದೆ ವೈದ್ಯಕೀಯ ವೃತ್ರಿ ನಡೆಸಲು ಸಾಧ್ಯವಿಲ್ಲ ಎಂದು ಲಾಡ್ ಹೇಳಿ ಕಳಿಸಿದರು.

ಉದಯ ವಾರ್ತೆ ಧಾರವಾಡ


Share to all

You May Also Like

More From Author