ಹುಬ್ಬಳ್ಳಿ ವಿದ್ಯಾನಗರ ಪೋಲೀಸರ ಕಾರ್ಯಾಚರಣೆ.ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ.
ಹುಬ್ಬಳ್ಳಿ:- ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯನ್ನೇ ಕಳ್ಳತದ ಕೇಂದ್ರ ಸ್ಥಾನ ಮಾಡಿಕೊಂಡಿದ್ದ ಅಂತರ ಜಿಲ್ಲಾ ಬೈಕ್ ಕಳ್ಳನನ್ನು ಹೆಡಮುರಿ ಕಟ್ಟುವಲ್ಲಿ ವಿದ್ಯಾನಗರ ಪೋಲೀಸರು ಯಶಸ್ವಿಯಾಗಿದ್ದಾರೆ.
ಸವದತ್ತಿ ಮೂಲದ ಶಂಕರಪ್ಪ ಗಡೇಕರ ಎಂಬಾತ ನಕಲಿ ಕೀ ಬಳಿಸಿ ಕಿಮ್ಸ್ ಆಸ್ಪತ್ರೆ ಆವರಣದಲ್ಲಿ ನಿಲ್ಲಿಸಿದ ಬೈಕಗಳನ್ನು ಕಳ್ಳತನ ಮಾಡಿ ಮಾರಾಟ ಮಾಡತಿದ್ದ.ಬೈಕ್ ಕಳೆದುಕೊಂಡವನು ಕೊಟ್ಟ ದೂರಿನನ್ವಯ ವಿದ್ಯಾನಗರದ ಪಿಆಯ್ ಜಯಂತ ಗೌಳಿ ನಿರ್ಧೇಶನದಂತೆ ಫೀಲ್ಡಿಗಿಳಿದ ಪಿಎಸ್ಆಯ್ ಶ್ರೀಮಂತ ಹುಣಸಿಕಟ್ಟಿ ಆ್ಯಂಡ್ ಖಡಕ್ ಕ್ರೈಂ ಟೀಂ ಆರೋಪಿಯನ್ನು ಸಿನಿಮೀಯ ಸ್ಟೈಲ್ ನಲ್ಲಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತನಿಂದ 9 ಹೀರೋ ಹೊಂಡಾ ಬೈಕ್.3 ಸ್ಕೂಟರ್.3 ಬುಲೆಟ್ ಗಳನ್ನು ಹಿಡಿದು ತರುವಲ್ಲಿ ಯಶಸ್ವಿಯಾಗಿದ್ದಾರೆ.ಕಾರ್ಯಾಚರಣೆಯಲ್ಲಿ ಪಿಎಸ್ಆಯ್ ಗಳಾದ ಶ್ರೀಮಂತ ಹುಣಸಿಕಟ್ಟಿ,ಜಿ ಎಸ್ ಕಲ್ಯಾಣಿ ಪರಶುರಾಮ ಹಿರಗಣ್ಣವರ.ಶಿವಾನಂದ ತಿರಕಣ್ಣವರ.ಮಲ್ಲಿಕಾರ್ಜುನ ಧನಿಗೊಂಡ.ಮಂಜುನಾಥ ಯಕ್ಕಡಿ.ವಾಯ್ ಎಮ್ ಶೇಂಡ್ಗೆ.ಸಯ್ಯದ್ ಅಲಿ ತಹಶಿಲ್ದಾರ. ರಮೇಶ ಹಲ್ಲೆ.ಮಂಜುನಾಥ ಏಣಗಿ.ಶರಣಗೌಡ ಮೂಲಿಮನಿ ಮತ್ತು ಪ್ರಕಾಶ ಟಕ್ಕಣ್ಣವರ ಭಾಗವಹಿಸಿದ್ದರು.
ಉದಯ ವಾರ್ತೆ ಹುಬ್ಬಳ್ಳಿ