ದರಿದ್ರ ಸರ್ಕಾರ ಎನ್ನುತ್ತಾ ಸರ್ಕಾರದ ವಿರುದ್ದ ಸಂದೇಶ ಹರಿಬಿಟ್ಟ ಸರ್ಕಾರಿ ನೌಕರ – HDMC ಪ್ರಥಮ ದರ್ಜೆ ಸಹಾಯಕ ನೌಕರನಿಂದ ಯಡವಟ್ಟು

Share to all

ದರಿದ್ರ ಸರ್ಕಾರ ಎನ್ನುತ್ತಾ ಸರ್ಕಾರದ ವಿರುದ್ದ ಸಂದೇಶ ಹರಿಬಿಟ್ಟ ಸರ್ಕಾರಿ ನೌಕರ – HDMC ಪ್ರಥಮ ದರ್ಜೆ ಸಹಾಯಕ ನೌಕರನಿಂದ ಯಡವಟ್ಟು

ಹುಬ್ಬಳ್ಳಿ –

ಸರ್ಕಾರಿ ನೌಕರರೊಬ್ಬರು ಸರ್ಕಾರದ ವಿರುದ್ದವೇ ದರಿದ್ರ ಸರ್ಕಾರ ಎಂದು ಸಂದೇಶವನ್ನು ಹರಿಬಿಟ್ಟ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.ಹೌದು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಪ್ರಥಮ ದರ್ಜೆ ಸಹಾಯಕ ನೌಕರನಿಂದ ಈ ಒಂದು ಎಡವಟ್ಟು ನಡೆದಿದೆ.ಹುಬ್ಬಳ್ಳಿ -ಧಾರವಾಡ ಮಹಾನಗರ ಪಾಲಿಕೆಯಲ್ಲಿ(J branch) ನಲ್ಲಿ ಪ್ರಥಮ ದರ್ಜೆ ಸಹಾಯಕನಾಗಿರುವ ಶಂಕರ ಕುಡ್ಲಣ್ಣವರ ವಾಟ್ಸ್ ಆಫ್ ಗ್ರೂಪ್ ನ ಸಾಮಾಜಿಕ ಜಾಲತಾಣದಲ್ಲಿ ಸರಕಾರದ ವಿರುದ್ಧ ಸಂದೇಶವನ್ನು ಹರಿಬಿಟ್ಟು ಯಡವಟ್ಟು ಮಾಡಿಕೊಂಡಿದ್ದಾನೆ.

ವಾಟ್ಸ್ ಆಫ್ ಗ್ರುಪ್ ನಲ್ಲಿ ದರಿದ್ರ ಸರ್ಕಾರ ಎಂದ ಸಂದೇಶ ಹರಿಬಿಟ್ಟಿದ್ದಾರೆ ಶಂಕರ ಕಾಂಗ್ರೆಸ್ ಸರ್ಕಾರ 22 ರಂದು ಮುಜರಾಯಿ ದೇವಸ್ಥಾನದಲ್ಲಿ ಪೂಜೆ ಮಾಡಲು ಆದೇಶ ನೀಡಿದೆ.ಹುಂಡಿಯಲ್ಲಿ ಬರೋ ಹಣ ಕಾಂಗ್ರೆಸ್ ಲೋಕಸಭೆ ಚುನಾವಣೆಗೆ ಬಳಸಿಕೊಳ್ಳೋ‌ ಪ್ಲ್ಯಾನ್ ಮಾಡಿದೆ.ಹುಂಡಿಯಲ್ಲಿ ಹಾಕಿದ ಹಣ ಗ್ಯಾರಂಟಿ ಯೋಜನೆಗೆ ಬಳಸಿಕೊಳ್ಳೋ ಪ್ಲ್ಯಾನ್ ಇದು ಎಂದು ಸಂದೇಶ ಹಾಕಿದ್ದಾನೆ.ನಮ್ಮ‌ ಹಣವನ್ನು ಬೇರೆ ಸಾಮಾಜಕ್ಕೆ ಬಳಸಿಕೊಳ್ಳೋ ದರಿದ್ರ ಸರ್ಕಾರದ ತಂತ್ರಕ್ಕೆ ಬಲಿಯಾಗಬೇಡಿ ಹಿಂದೂಗಳೇ ಎನ್ನುತ್ತಾ 22 ಕ್ಕೆ ದೇವಸ್ಥಾನಕ್ಕೆ ಹೋದ್ರು ಹುಂಡಿಯಲ್ಲಿ ಹಣ ಹಾಕಬೇಡಿ.ಮನೆಯಲ್ಲಿ ಹುಂಡಿ ಇಟ್ಟು ಹಣ ಹಾಕಿ ತುಂಬಿದ ನಂತರ ಅನಾಥ ಮಕ್ಕಳಿಗೆ ಬಟ್ಟೆ ಊಟ ಕೊಡಿಸಿ.ಧರ್ಮ ರಕ್ಷಣೆ ಮಾಡಿ,ರಾಜಕೀಯಕ್ಕೆ ಮರುಳಾಗಬೇಡಿ ಎಂದು ವಾಟ್ಸ್ ಆಪ್ ಗ್ರೂಪ್ ಗಳಲ್ಲಿ ಸಂದೇಶ ಹಾಕಿದ್ದಾನೆ ಸರ್ಕಾರಿ ನೌಕರ.

ಇನ್ನೂ ನೌಕರನ ಈ ಒಂದು ನಡೆಗೆ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಅಸಮಾಧಾನ ವ್ಯಕ್ತವಾಗಿದೆ.ಹುಬ್ಬಳ್ಳಿ ಧಾರವಾಡ ಮಾಹಾನಗರ ಪಾಲಿಕೆಯಲ್ಲಿ ಪ್ರಥಮ ದರ್ಜೆ ನೌಕರನಾಗಿರುವ ಶಂಕರ ಕುಡ್ಲಣ್ಣವರ ಸರಕಾರದ ಅನ್ನ ತಿಂದು ಸರಕಾರದ ವಿರುದ್ಧ ಮಾತನಾಡೋ ಇಂತಹ ನೌಕರನ ವಿರುದ್ಧ ಮಹಾನಗರ ಪಾಲಿಕೆಯ ಆಯುಕ್ತರು ಕ್ರಮಕೈಕೊಳ್ಳುತ್ತಾರಾ ಎಂಬೋದನ್ನ ಕಾದು ನೋಡಬೇಕಾಗಿದೆ.

ಉದಯ ವಾರ್ತೆ ಹುಬ್ಬಳ್ಳಿ


Share to all

You May Also Like

More From Author