ಜಗಲಪೇಟ ಅರಣ್ಯ ವಿಭಾಗದಲ್ಲಿ ಹಾವು ಕಡಿದು ಕಾರ್ಮಿಕ ಮಹಿಳೆ ಸಾವು ಪ್ರಕರಣ.ಆಟ ಆಡಿದರಾ ಅರಣ್ಯ ಅಧಿಕಾರಿಗಳು.ದಲಿತ ಮಹಿಳೆಗೆ ನ್ಯಾಯ ಕೊಡಿಸುವವರು ಯಾರು.?

Share to all

ಜಗಲಪೇಟ ಅರಣ್ಯ ವಿಭಾಗದಲ್ಲಿ ಹಾವು ಕಡಿದು ಕಾರ್ಮಿಕ ಮಹಿಳೆ ಸಾವು ಪ್ರಕರಣ.ಆಟ ಆಡಿದರಾ ಅರಣ್ಯ ಅಧಿಕಾರಿಗಳು.ದಲಿತ ಮಹಿಳೆಗೆ ನ್ಯಾಯ ಕೊಡಿಸುವವರು ಯಾರು.?

ಹಳಿಯಾಳ:- ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ಅರಣ್ಯ ವಿಭಾಗದ ಜಗಲಪೇಟೆ ಅರಣ್ಯ ವಿಭಾಗದಲ್ಲಿ ದಲಿತ ಮಹಿಳೆ ಹಾವು ಕಡಿದು ಸಾವನ್ನಪ್ಪಿದ ಪ್ರಕರಣವನ್ನು ಅರಣ್ಯ ಅಧಿಕಾರಿಗಳು ಮುಚ್ಚಿಹಾಕಿದ್ದಾರೆಂದು ಮೂಲಗಳಿಂದ ತಿಳಿದು ಬಂದಿದೆ.

ಕಳೆದ 13-1-2024 ರಂದು ಬೆಳಿಗ್ಗೆ 11-00 ಘಂಟೆಗೆ ಕಲಘಟಗಿ ತಾಲೂಕಿನ ದೇವಿಕೊಪ್ಪ ತಾಂಡಾದ ನಿವಾಸಿ ರತ್ನವ್ವ.ರಾಮಚಂದ್ರ ಲಮಾಣಿ (35) ಅಖೇಸಿಯಾ ಮರ ಕಡಿಯಲು ಜಗಲಪೇಟ ಅರಣ್ಯ ಪ್ರದೇಶದ ಅಡನಗಾಂವ ಗ್ರಾಮದ ಅರಣ್ಯ ಪ್ರದೇಶದಲ್ಲಿ ಹೋದಾಗ ಹಾವು ಕಚ್ಚಿ ಖಾನಾಪುರ ಸರಕಾರಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.

ಅರಣ್ಯ ಅಧಿಕಾರಿ ಚಂದ್ರಕಾಂತ ಹಿಪ್ಪರಗಿ ಅವರೇ ಈ ಸಾವಿನ ಬಗ್ಗೆ ಉತ್ತರಿಸಬೇಕಾದವರು ಕಳೆದ ಎರಡ್ಮೂರು ದಿನದಿಂದ ಪೋನ್ ನಾಟ್ ರೀಚೇಬಲ್.ಮಹಿಳೆ ಸಾವಿನ ವಿಚಾರವಾಗಿ ಮಹಿಳೆ ಸಾವನ್ನಪ್ಪಿದ ದಿನ ಪೋನ್ ರಿಸೀವ್ ಮಾಡಿ ಉದಯ ವಾರ್ತೆಯೊಂದಿಗೆ ಮಾತನಾಡಿದ್ದ ವಲಯ ಅರಣ್ಯ ಅಧಿಕಾರಿ ಚಂದ್ರಕಾಂತ ಅವರು ಹೌದು ಹಾವು ಕಡಿದು ಸಾವನ್ನಪ್ಪಿದ್ದಾರೆ.ಅವರಿಂದ ಅರ್ಜಿ ಪಡೆದು ಸರಕಾರಕ್ಕೆ ಪತ್ರ ಬರೆದು ಪರಿಹಾರವನ್ನು ಕೊಡಿಸುತ್ತೇವೆ. ಎಂದವರು ಗುತ್ತಿಗೆದಾರ ಯಾರು ಎಂದು ಕೇಳಿದರೆ ಆಮೇಲೆ ಹೇಳತೇನಿ ಅಂದವರು ಅಂದಿನಿಂದ ಈವರೆಗೆ ನಾಟ್ ರೀಚೇಬಲ್ ಈಗ ಈ ಪ್ರಕರಣವನ್ನು ಎಲ್ಲಾ ಉಲ್ಟಾ ಪಲ್ಟಾ ಮಾಡಿದ್ದಾರೆ ಎನ್ನಲಾಗಿದೆ.ವಿಚಿತ್ರವೆಂದರೆ ಯಾವುದೇ ಗುತ್ತಿಗೆದಾರ ಕೆಲಸ ಮಾಡಬೇಕಾದರೆ.ಈ ಚಂದ್ರಕಾಂತ ಅವರ ಕೈ ಕೆಳಗೆ ಕೆಲಸ ಮಾಡಬೇಕು.ಆದರೆ ಅವರಿಗೆ ಗುತ್ತಿಗೆದಾರ ಯಾರು ಎಂದರೆ ಹೆಸರೇ ಹೇಳತಿಲ್ಲಾ ಅಂದರೆ ಏನರ್ಥ ಸಾಹೇಬ್ರೇ.

ಇನ್ನೂ ವಿಚಿತ್ರ ಅಂದರೆ ಅಖೇಶಿಯಾ ಮರ ಕಡಿದಿದ್ದು ಆಯ್ತು.ಮಹಿಳೆ ಸಾವನ್ನಪ್ಪಿದ್ದು ಆಯತು.ಆದರೆ ಈಗ ಗುತ್ತಿಗೆದಾರರನ್ನು ಹುಡುಕುವ ಪ್ರಯತ್ಮ ಮಾಡತಿದ್ದಾರೆ ಎಂದು ಉದಯ ವಾರ್ತೆಗೆ ತಿಳಿದು ಬಂದಿದೆ.

ಹೌದು ಆ ದಲಿತ ಮಹಿಳೆಯ ಸಾವನ್ನು ರಾಮನಗರ ಪೋಲೀಸ ಠಾಣೆಯಲ್ಲಿ ಅಸ್ವಾಭಾವಿಕ ಸಾವು ಎಂದು ದೂರು ದಾಖಲಾಗಿರುತ್ತದೆ.ಅಲ್ಲದೇ ಅರಣ್ಯ ಅಧಿಕಾರಿಗಳು ಹಾವು ಕಡಿದು ಮಹಿಳೆ ಸಾವನ್ನಪ್ಪಿದರೂ ಅಸ್ವಾಭಾವಿಕ ಸಾವು ಎಂದು ದೂರು ಕೊಡಿಸಿದ್ದು ಯಾಕೆ.?ಅಲ್ಲದೇ ಅರಣ್ಯದಲ್ಲಿಯ ಮರಗಳನ್ನು ಕಡಿಯಲು ಟೆಂಡರ್ ಆಗಿರುತ್ತವೆ.ಅದಕ್ಕೊಬ್ಬ ಟೆಂಡರದಾರರು ಇರುತ್ತಾರೆ.ಅಲ್ಲಿಯ ಮರ ಕಡಿಯಲು ಹೋಗುವಾಗಲೂ ಕಾರ್ಮಿಕ ಮಹಿಳೆಯರೇ ಇರಬೇಕು.ಟೆಂಡರ್ ದಾರ ತನ್ನ ಕಾರ್ಮಿಕರ ನೊಂದಣಿ ಮಾಡಿಸಿರಬೇಕು.ಪಿಎಪ್.ಇ ಎಸ್ ಆಯ್ ತುಂಬಿರಬೇಕು.ಆದರೆ ಇಲ್ಲಿ ನಡೆದಿರುವುದೇ ಬೇರೆ.ಅದೆಲ್ಲವೂ ಸಂಪೂರ್ಣ ತನಿಖೆಯಾಗಬೇಕು ಅಂದಾಗ ಮಾತ್ರ ನಿಜಾಂಶ ಹೊರಗೆ ಬರಲಿದೆ.

ಉದಯ ವಾರ್ತೆ ಹಳಿಯಾಳ


Share to all

You May Also Like

More From Author