500 ವರ್ಷಗಳ ಕತ್ತಲೆ ನಂತರ ಬೆಳಕು.ಕಿಚ್ಚನ ಬೆಂಗಳೂರಿನ ಮನೆಯಲ್ಲಿ ರಾಮೋತ್ಸವ.
ಬೆಂಗಳೂರು:-ಅಯೋದ್ಯಯ ರಾಮ ಮಂದಿರದಲ್ಲಿ ರಾಮ ಲಲ್ಲಾ ವಿಗ್ರಹ ಪ್ರಾಣ ಪ್ರತಿಷ್ಠಾಪನೆ ಶ್ರದ್ಧೆ,ಭಕ್ತಿಯಿಂದ ಶಾಸ್ತ್ರೋತ್ಸವವಾಗಿ ನಡೆಯಿತು. ಇಂತಹ ಸಂದರ್ಭದಲ್ಲಿ ದೇಶದ ಜನ ಸಂಬ್ರಮ ಪಡುತ್ತಿದೆ.
ಇದೇ ಸಂದರ್ಭದಲ್ಲಿ ಕನ್ನಡ ಚಿತ್ರನಟ ಸುದೀಪ್ ಸಹ ತಮ್ಮ ಮನೆಯಲ್ಲಿ ದೀಪ ಬೆಳಗುವುದರ ಮೂಲಕ ರಾಮೋತ್ಸವ ಪ್ರತಿಷ್ಠಾನವನ್ನು ಸಂಬ್ರಮಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕಿಚ್ಚ ಸುದೀಪ.500 ವರ್ಷಗಳ ಕತ್ತಲೆ ದೂರವಾಗಿದೆ.ರಾಮನ ಭುಜಗಳು ನಮ್ಮ ಶಕ್ತಿ,ಅವರ ಎದೆ ನಮ್ಮ ಮಹತ್ವಾಕಾಂಕ್ಷಿ, ಅವನ ಕೈಗಳು ನಮ್ಮ ಶೌರ್ಯ, ಆತನ ಪಾದಗಳು ನಮ್ಮ ಮೋಕ್ಷ,ಅವನ ರೂಪದಲ್ಲಿ ಎಲ್ಲಾ ಸ್ರಷ್ಠಿಯ ಸಾರ ಅಡಗಿದೆ.ಇಂದಿನಿಂದ ಹೊಸ ಯುಗ ಆರಂಭವಾಗಿದೆ.ಇದು 500 ವರ್ಷಗಳ ಕತ್ತಲೆಯ ನಂತರ ಒಂದು ರಾಷ್ಟ್ರದ ಜನರ ಬೆಳಕಿನ ಪ್ರಾಣ ಪ್ರತಿಷ್ಠೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.