ಶೆಟ್ಟರ್ ಘರ್ ವಾಪಸ್ಸೀ ರಾಜ್ಯ ರಾಜಕೀಯದಲ್ಲಿ ಸಂಚಲನ.ಕಾಂಗ್ರೆಸ್ಸಿನಲ್ಲಿ ರಾಜೀನಾಮೆ ಪರ್ವ: ಬಿಜೆಪಿ ಸೇರಲಿರುವ ಕೈ ಮುಖಂಡ
ಹುಬ್ಬಳ್ಳಿ: ಶೆಟ್ಟರ್ ಬಿಜೆಪಿ ಸೇರ್ಪಡೆ ಆಗುತ್ತಲೇ ಇತ್ತ ಡಿಕೆಶಿ ಆಪ್ತರಿಗೆ ಗಾಳ ಹಾಕಲು ಬಿ.ವೈ.ವಿಜಯೇಂದ್ರ ಮುಂದಾಗಿದ್ದಾರೆ. ಈ ನಿಟ್ಟಿನಲ್ಲಿ ಧಾರವಾಡ ಜಿಲ್ಲೆಯಲ್ಲಿ ರಾಜೀನಾಮೆ ಪರ್ವ ಆರಂಭವಾಗಿದೆ.
ಹೌದು.. ಶೆಟ್ಟರ್ ಮತ್ತೆ ಬಿಜೆಪಿ ಸೇರ್ಪಡೆಯಿಂದ ಮರ್ಮಘಾತಕ್ಕೊಳ್ಳಗಾಗಿರುವ ಕಾಂಗ್ರೆಸ್ ಧಾರವಾಡ ಪಾಳೆಯದಲ್ಲಿ ಅಲ್ಲೋಲ ಕಲ್ಲೋಲವಾಗಿದೆ. ಮಾಜಿ ಸಿಎಂ ಜಗದೀಶ ಶೆಟ್ಟರ್ ಘರ್ ವಾಪಸ್ಸಿ ಬೆನ್ನಲ್ಲೇ ಕಾಂಗ್ರೆಸ್‌ನಲ್ಲಿ ರಾಜೀನಾಮೆ ಪರ್ವ ಆರಂಭವಾಗಿದ್ದು, ಧಾರವಾಡ ಜಿಲ್ಲೆಯ ಪಂಚಮಸಾಲಿ ಸಮಾಜದ ಜಿಲ್ಲಾ ಯುವ ಘಟಕದ ಅಧ್ಯಕ್ಷ ವಿರೇಶ ಉಂಡಿ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ್ದಾರೆ.
ಇನ್ನೂ ಅಪಾರ ಬೆಂಬಲಿಗರೊಂದಿಗೆ ನಾಳೆ ಬಿಜೆಪಿ ಸೇರ್ಪಡೆ ಆಗಲಿರುವ ಕಾಂಗ್ರೆಸ್ ಮುಖಂಡ ವೀರೇಶ ಉಂಡಿ. ಕಾಂಗ್ರೆಸ್ ಒಡನಾಟಕ್ಕೆ ಬ್ರೇಕ್ ಹಾಕಿ ಕಮಲ ಹಿಡಿಯಲಿದ್ದಾರೆ.