ಬಾಗಲಕೋಟೆ ಲೋಕಸಭೆ ಟಿಕೆಟ್ ಘೋಷಣೆಗೂ ಮುನ್ನಾ ಪ್ರಚಾರಕ್ಕಿಳಿದ ಪ್ರಕಾಶ ಜೆ ಪರಪ್ಪ ಹಾಗೂ ಧರ್ಮಪತ್ನಿ ಕವಿತಾ ಪ್ರಕಾಶ.
ಬಾದಾಮಿ:-ಬಿ. ಜೆ. ಪಿ. ಬಾಗಲಕೋಟೆ ಲೋಕಸಭಾ ಪ್ರಬಲ ಟಿಕೆಟ್ ಆಕಾಂಕ್ಷಿ ಪ್ರಕಾಶ್ ಜೆ ಪರಪ್ಪ ಅವರ ಧರ್ಮಪತ್ನಿ ಕವಿತಾ ಪ್ರಕಾಶ್ ಪರಪ್ಪ ಅವರು”” MP ಚಾಯ್ ಇನ್ ಕುಂಕುಮ ಸೌಭಾಗ್ಯ”” ಮಹಿಳಾ ಜನಸಂಪರ್ಕ ಅಭಿಯಾನದಲ್ಲಿ ಭರ್ಜರಿ ಪ್ರಚಾರ ಆರಂಭಿಸಿದ್ದಾರೆ.
ಬಾಗಲಕೋಟೆ ಲೋಕಸಭಾ ಚುನಾವಣಾ ಅಖಾಡದಲ್ಲಿ ನಾಲ್ಕು ಸಲ ಗೆಲುವಿನ ಕಿರೀಟವನ್ನು ಧರಿಸಿದ್ದ ಹಾಲಿ ಸಂಸದ ಪಿ. ಸಿ. ಗದ್ದಿಗೌಡರ ಒಂದು ಕಡೆಯಾದರೆ,, ಬಿ. ಜೆ ಪಿ. ಹೈ ಕಮಾಂಡ್ ವಯಸ್ಸಿನ ಕಾರಣ ದಿಂದ ಸುಮಾರು 70 ವಯೋಮಾನ ದಾಟಿದವರಿಗೆ ಟಿಕೆಟ್ ನೀಡುವ ಸಂಭವನೀಯತೆ ತುಂಬಾ ಕಡಿಮೆ ಇರುವ ವಿಚಾರ ಮಾಧ್ಯಮದಲ್ಲಿ ಹೊರಬರುತ್ತಿರುವ ಸಂಗತಿ ಹೊರಬೀಳುತ್ತಲಿದೆ.
ಹಾಗೇ ಇನ್ನೊಂದು ಕಡೆ ಐ. ಎ. ಎಸ್. ಪಾಸಾಗಿ ಆರ್ಥಿಕ ಇಲಾಖೆಯಲ್ಲಿ ಕಾರ್ಯನಿರ್ವಹಿಸಿ ವೈದ್ಯಕೀಯ ಕ್ಷೇತ್ರದಲ್ಲಿ ಎಂ. ಬಿ. ಬಿ. ಎಸ್. ಆದ ಪ್ರಕಾಶ್ ಜೆ. ಪರಪ್ಪ ಅವರ MP ಚಾಯ್ ಜನಸಂಪರ್ಕ್ ಅಭಿಯಾನ ಭರ್ಜರಿ ನಡೆದಿದ್ದು ಅಭಿಯಾನಕ್ಕೆ ಸಾಥ್ ನೀಡಿದ ಅವರ ಧರ್ಮಪತ್ನಿ ಶ್ರೀಮತಿ ಕವಿತಾ ಪ್ರಕಾಶ್ ಪರಪ್ಪ ಅವರು
“ಕುಂಕುಮ ಸೌಭಾಗ್ಯ ” ಅಭಿಯಾನದಡಿ ಡಾ|| ಪ್ರಕಾಶ್ ಜೆ. ಪರಪ್ಪ ಅವರ ಧರ್ಮಪತ್ನಿ ಶ್ರೀಮತಿ ಕವಿತಾ ಪ್ರಕಾಶ್ ಪರಪ್ಪ ಅವರು ಐಹೊಳೆ, ಹಲಕುರ್ಕಿ,,ನಿಂಬಲಗುಂದಿ, ಗದ್ದನಕೇರಿ, ಬೇವಿನಮಟ್ಟಿ, ನೀರಲಕೇರಿ ಗ್ರಾಮಗಳ ಮಹಿಳೆಯರೊಂದಿಗೆ ಚರ್ಚಿಸಿ ಕುಂಕುಮ ನೀಡಿದರು.
“” MP ಚಾಯ್ ಇನ್ ಕುಂಕುಮ ಸೌಭಾಗ್ಯ”” ಎನ್ನುವ ಜನಸಂಪರ್ಕ್ ಅಭಿಯಾನದಲ್ಲಿ ಮಹಿಳೆಯರಿಗೆ ಪ್ರಧಾನಿ ನರೇಂದ್ರ ಮೋದಿ ಯವರ ಮಹಿಳಾ ಕೆಂದ್ರಿತ ಯೋಜನೆಗಳು ಹಾಗೂ ಮಹಿಳಾ ಸಂಬಂಧಿತ ವಿಚಾರಗಳ ಬಗ್ಗೆ ಹಳ್ಳಿಗಳ ಮಹಿಳೆಯರೊಂದಿಗೆ ಚರ್ಚಿಸಿ ಕೇಂದ್ರ ಸರಕಾರದ ಮಹಿಳಾ ಯೋಜನೆಗಳ ಬಗ್ಗೆ ಐಹೊಳೆ ಗ್ರಾಮದಲ್ಲಿ ಮಹಿಳೆಯರೊಂದಿಗೆ ಮುಕ್ತವಾಗಿ ಚರ್ಚಿಸಿದ ಅವರು ಭರ್ಜರಿ ಪ್ರಚಾರ ನಡೆಸಿದ್ದಾರೆ.
ಹಾಗಾದರೆ ಬಾಗಲಕೋಟೆ ಲೋಕಸಭಾ ಚುನಾವಣೆ ಟಿಕೆಟ್ ಹೈಕಮಾಂಡ್ ಹೊಸಬರಿಗೆ ಮಣೆ ಹಾಕತ್ತಾ ಹೇಗೆ ಎಂದು ಕಾಯ್ದು ನೋಡಬೇಕಿದೆ.