ನೂತನ ನಿಗಮ ಮಂಡಳಿ ಅದ್ಯಕ್ಷನ ಸ್ವಾಗತಕ್ಕೆ ಶ್ರಂಗಾರ ಗೊಂಡ ಹುಬ್ಬಳ್ಳಿ.ಗಬ್ಬೂರ ಬೈಪಾಸನಲ್ಲಿ ಸ್ವಾಗತ ಕೋರಲಿರುವ ಮುಖಂಡರು ಹಾಗೂ ಕಾರ್ಯಕರ್ತರು.
ಹುಬ್ಬಳ್ಳಿ:-ನೂತನವಾಗಿ ಕರ್ನಾಟಕ ಕೊಳಚೆ ನಿರ್ಮೂಲನಾ ಅಭಿವೃದ್ಧಿ ಮಂಡಳಿಗೆ ಅಧ್ಯಕ್ಷರಾಗಿ ಮೊದಲ ಬಾರಿಗೆ ಹುಬ್ಬಳ್ಳಿಗೆ ಆಗಮಿಸುತ್ತಿರುವ ಶಾಸಕ ಪ್ರಸಾದ ಅಬ್ಬಯ್ಯ ಅವರು ಹುಬ್ಬಳ್ಳಿಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಇಂದು ಹುಬ್ಬಳ್ಳಿಯ ಗಬ್ಬೂರ ಬೈಪಾಸನಲ್ಲಿ ಪಕ್ಷದ ಕಾರ್ಯಕರ್ತರು,ಮುಖಂಡರು ಅಭೂತಪೂರ್ವ ಸ್ವಾಗತ ಕೋರಲು ಸಜ್ಜಾಗಿದ್ದಾರೆ.
ಗಬ್ಬೂರ ಬೈ ಪಾಸನಲ್ಲಿ ಮುಖಂಡರು ತಮ್ಮ ನಾಯಕನ ಸ್ವಾಗತಕ್ಕೆ ಬ್ಯಾನರ್ ಹಾಗೂ ಬಟಿಂಗ್ಸ್ ಗಳನ್ನು ಕಟ್ಟಿದ್ದಾರೆ.ಅಲ್ಲದೇ ಗಜ ಗಾತ್ರದ ಮಾಲೆಯೊಂದಿಗೆ ನಾಯಕನ ಸ್ವಾಗತಕ್ಕೆ ಸಜ್ಜಾಗಿದ್ದಾರೆ.