ನವ ದಂಪತಿಗಳಿಗೆ ಮನೆಗೆ ಬಂದು ಶುಭ ಹಾರೈಸಿದ ಡಿ ಕೆ ಶಿವಕುಮಾರ್
ಹುಬ್ಬಳ್ಳಿ : ರಾಜ್ಯ ಕೆಪಿಸಿಸಿ ಅಧ್ಯಕ್ಷ ಹಾಗೂ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಕಳೆದ ರಾತ್ರಿ ಹುಬ್ಬಳ್ಳಿಯ ಮುಜಾಹಿದ್ ಕುಟುಂಬಸ್ಥರ ಮನೆಗೆ ರಾತ್ರಿ ವಿಶೇಷ ಬೇಟಿ ನೀಡಿ ಇತ್ತೀಚಿಗೆ ಮದುವೆಯಾಗಿದ್ದ ಕಾಂಗ್ರೆಸ್ ಮುಖಂಡ ಶಾಹಜಮನ್ ಮುಜಾಹಿದ್ ದಂಪತಿಗೆ ಶುಭಾಶಯ ಕೋರಿದರು
ಕೆಲ ದಿನಗಳ ಹಿಂದೆ ಉತ್ತರ ಪ್ರದೇಶದ ಲಕ್ನೋ ಪಟ್ಟಣದಲ್ಲಿ ಮದುವೆ ಆಗಿದ್ದ ಶಹಜಮನ ಮುಜಾಹಿ್ದೀನ್ ಮದುವೆಗೆ ಸ್ಥಳೀಯ ಶಾಸಕ ಪ್ರಸಾದ್ ಅಬ್ಬಯ್ಯ ,ರಾಜಕೀಯ ಧುರೀಣ ಸಿ ಎಂ ಇಬ್ರಾಹಿಂ,ಸೇರಿದಂತೆ ಅನೇಕರು ಆಗಮಿಸಿ ಶುಭ ಹಾರೈಸಿದ್ದರು
ಕಳೆದ ರಾತ್ರಿ ಡಿ ಕೆ ಶಿವಕುಮಾರ್ ಅವರೊಂದಿಗೆ ಕಾಂಗ್ರೆಸ್ ಯುವ ಮುಖಂಡ ರಜತ ಉಳ್ಳಾಗಡ್ಡಿಮಠ,ಪಾಲಿಕೆ ಸದಸ್ಯ ಚೇತನ್ ಹಿರೇಕೆರೂರು, ಯುವ ಉದ್ಯಮಿ ಇರ್ಫಾನ್ ಖಾನ್ ಸೇರಿದಂತೆ ಅನೇಕ ನಾಯಕರು ಉಪಸ್ಥಿತರಿದ್ದರು, ಈ ವೇಳೆ ಕುಟುಂಬ ಸದಸ್ಯರೊಂದಿಗೆ ಕೆಲ ಕಾಲ ಹರಟೆ ಹೊಡೆದ ಡಿಕೆಶಿ ಶುಭಾಶಯ ಕೋರಿ ಖಾಸಗಿ ಹೋಟೆಲ್ ಗೆ ತೆರಳಿದ್ದರು