ಹುಬ್ಬಳ್ಳಿ
ಕಾವೇರಿಗಾಗಿ ಕರೆ ನೀಡಿದ್ದ ಬಂದ್ ಹುಬ್ಬಳ್ಳಿಯಲ್ಲಿ ಪ್ರತಿಭಟನೆಗೆ ಮಾತ್ರ ಸೀಮಿತವಾಯಿತು. ಉತ್ತರ ಕರ್ನಾಟಕದ ಹೋರಾಟಗಾರರನ್ನು ಕಡೆಗಣನೆ ಆರೋಪ, ಮಹದಾಯಿ ಹೋರಾಟಕ್ಕೆ ದಕ್ಷಿಣ ಕರ್ನಾಟಕ ಜನ, ಹೋರಾಟಗಾರರು ಕೈ ಜೋಡಸಿದೆ ಇರುವ ಕಾರಣ, ಕೇವಲ ನೈತಿಕ ಬೆಂಬಲ ಕಂಡು ಬಂತು. ವಿವಿಧ ಸಂಘಟನೆಗಳು ಪ್ರತಿಭಟನಾ ಮೆರವಣಿ ಮೂಲಕ ತಹಶಿಲ್ದಾರರಗೆ ಮನವಿ ಕೊಟ್ಟು ಹೋರಾಟಕ್ಕೆ ಬೆಂಬಲ ನೀಡಿದವು. ಇನ್ನೂಳಿದಂತೆ ನಗರದಲ್ಲಿ ವ್ಯಾಪಾರ ವಹಿವಾಟು, ಸರ್ಕಾರಿ, ಖಾಸಗಿ ಬಸ್ ಸಂಚಾರ ಎಂದಿನಂತೆ ಇತ್ತು. ಎಲ್ಲಾ ಶಾಲಾ ಕಾಲೇಜುಗಳು, ಸರ್ಕಾರಿ ಆಡಳಿತ ಕಚೇರಿಗಳು ಓಪನ್ ಇದ್ದವು. ಕೇವಲ ಸಂಘಟನೆಗಳ ಕಾರ್ಯಕರ್ತರು ಕಾವೇರಿಗೆ ಬೆಂಬಲ ವ್ಯಕ್ತಪಡಿಸಿದ್ದು ಬಿಟ್ಟ್ರೆ, ಜನ ಸಮಾನ್ಯರು ಯಾವುದೇ ತಲೆ ಕೆಡಿಸಿಕೊಳ್ಳ ತಮ್ಮ ನಿತ್ಯದ ಕಾರ್ಯದಲ್ಲಿ ತೊಡಗಿಕೊಂಡಿದ್ದರು.ಇನ್ನು ಕೆಲ ಸಂಘಟೆನಗಳು ಪ್ರತಿಭಟನೆ ಹಮ್ಮಿಕೊಂಡಿದ್ರು.ಬಂದ್ ಗೆ ನೈತಿಕ ಬೆಂಬಲ ನೀಡಿದ ವಿವಿಧ ಸಂಘಟನೆಗಳು, ಮಹದಾಯಿ ಮುನಿಸಿ ನಡೆಯೂ ಕಾವೇರಿ ಪರವಾಗಿ ಧ್ವನಿಯೆತ್ತಿ ಒಗ್ಗಟ್ಟು ಪ್ರದರ್ಶನ ಮಾಡಿದವು. ನಮ್ಮ ಕರ್ನಾಟಕ ಸೇನೆಯ ಉತ್ತರ ಕರ್ನಾಟಕ ಅಧ್ಯಕ್ಷ ಅಮೃತ್ ಇಜಾರಿ ನೇತೃತ್ವದಲ್ಲಿ ಹೊಸೂರು ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು. ಇನ್ನೂ ಇದೇ ವೆಳೆ ಚಿಗರಿ ಬಸ್ ಸಂಚಾರಕ್ಕೆ ಪ್ರತಿಭಟನಾಕಾರರು ಅಡ್ಡಿಪಡಿಸಿ ತಮ್ಮ ಆಕ್ರೋಶ ಹೊರಹಾಕಿದರು..ಬಳಿಕ ಚನ್ನಮ್ಮ ವೃತ್ತದ ವರಿಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ವೃತ್ತದಲ್ಲಿ ತಮಿಳುನಾಡು ಮುಖ್ಯ ಮಂತ್ರಿ ಸ್ಟಾಲಿನ್ ಭಾವಚಿತ್ರಕ್ಕೆ ಕೈ ಬಳೆ ಇಟ್ಟು, ಬೆಂಕಿ ಹಚ್ಚಿ ಹೋರಾಟಗಾರರು ತಮ್ಮ ಆಕ್ರೋಶ ಹೊರಹಾಕಿದರು.. ಪ್ರತಿಭಟನೆ ಬೇರೆ ರೂಪ ಪಡೆಯುತ್ತಿದ್ದಂತೆ ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದು ತಮ್ಮ ಬಸ್ ಮೂಲಕ ಠಾಣೆಗೆ ಕರೆದೊಯ್ಯದರು..ಇನ್ನು ಚೆನ್ನಮ್ಮ ವೃತ್ತದಲ್ಲಿ ವಿವಿಧ ಸಂಘಟನೆಗಳು ಒಗ್ಗೂಡಿ ಚೆನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸಿ, ತಮ್ಮ ಆಕ್ರೋಶ ಹೊರಹಾಕಿದವು. ಖಾಲಿ ಕೊಡ, ನೀರಿ ಬಾಟಲಿ ಕೊರಳಿಗೆ ಕಟ್ಟಿಕೊಂಡ ಪ್ರತಿಭಟನಾಕಾರರು, ಚನ್ನಮ್ಮ ವೃತ್ತದಿಂದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಕಚೇರಿವರಿಗೆ ಅರೆ ಬೆತ್ತಲೆ ಮೆರವಣಿಗೆ ನಡೆಸಿದರು.. ಜೋಶಿಯವರ ಕಚೇರಿ ಮುತ್ತಿಗೆ ಹಾಕಲು ಯತ್ನಿಸಲಾಯಿತು. ಪೊಲೀಸರು ಮಧ್ಯ ಪ್ರವೇಶಿಸಿ ಹೋರಾಟಗಾರರನ್ನು ತಡೆಯಲು ಮುಂದಾದರು. ಜೋಶಿ ಅವರ ಪರವಾಗಿ ಕಚೇರಿ ಸಿಬ್ಬಂದಿ ಮನವಿ ಪತ್ರ ಸ್ವೀಕಾರ ಮಾಡಿದರು..
ಉದಯ ವಾರ್ತೆ ಹುಬ್ಬಳ್ಳಿ