ಮಾರಕಾಸ್ತ್ರಗಳಿಂದ ಕೊಚ್ಚಿ ಭೀಕರವಾಗಿ ಕೊಲೆ.ಶಿಕ್ಷಕನ ಕೈ ಕತ್ತರಿಸಿ ಕುತ್ತಿಗೆಗೆ ಹೊಡೆದು ಕೊಲೆ.

Share to all

ಮಾರಕಾಸ್ತ್ರಗಳಿಂದ ಕೊಚ್ಚಿ ಭೀಕರವಾಗಿ ಕೊಲೆ.ಶಿಕ್ಷಕನ ಕೈ ಕತ್ತರಿಸಿ ಕುತ್ತಿಗೆಗೆ ಹೊಡೆದು ಕೊಲೆ.

ತುಮಕೂರು :-ಶಿಕ್ಷಕರೊಬ್ಬರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ತುಮಕೂರಿನಲ್ಲಿ ನಡೆದಿದೆ.ಜಿಲ್ಲೆಯ ಕುಣಿಗಲ್ ತಾಲ್ಲೂಕಿನ ಹೇರೂರ ಗ್ರಾಮದಲ್ಲಿ ಈ ಒಂದು ಘಟನೆ ನಡೆದಿದೆ.ಮರಿಯಪ್ಪ ಕೊಲೆಯಾದ ಶಿಕ್ಷಕರಾಗಿದ್ದು ಕುಣಿಗಲ್ ತಾಲ್ಲೂಕಿನ ಕಸಬಾ ಹೊಬಳಿಯ ಕುಳ್ಳಿನಂಜಯ್ಯಪಾಳ್ಯದ ನಿವಾಸಿಯಾಗಿದ್ದು ಮೇದೂರು ಸರಕಾರಿ ಶಾಲೆಯಲ್ಲಿ ಅತಿಥಿ ಶಿಕ್ಷಕರಾಗಿದ್ದಾರೆ.ಅತಿಥಿ ಶಿಕ್ಷಕನನ್ನ ಮಾರಕಾಸ್ತ್ರಗಳಿಂದ ಕೊಚ್ಚಿ ಭೀಕರ ಕೊಲೆಯಾಗಿದೆ.ಬೆಳಗಿನ ಜಾವ ಯಾರೋ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೈ ಕತ್ತರಿಸಿ ನಂತರ ತಲೆಭಾಗಕ್ಕೆ ಬಲವಾಗಿ ಹೊಡೆದು ಭೀಕರವಾಗಿ ಕೊಲೆಯನ್ನು ಮಾಡಿದ್ದಾರೆ.ಸ್ಥಳಕ್ಕೆ ಎಎಸ್ ಪಿ ಮರಿಯಪ್ಪ,ಕುಣಿಗಲ್ ಡಿವೈಎಸ್ ಪಿ ಓಂಪ್ರಕಾಶ್ ಹಾಗೂ ಇನ್ಸ್ಪೆಕ್ಟರ್ ನವೀನ್ ಗೌಡ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.ಈ ಒಂದು ಘಟನೆ ಸಂಬಂಧ ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಕುಣಿಗಲ್ ಪೊಲೀಸರಿಂದ ತನಿಖೆ ಮುಂದುವರಿದಿದ್ದು ಪ್ರಕರಣ ದಾಖಲಾಗಿದೆ.

ಉದಯ ವಾರ್ತೆ ತುಮಕೂರ


Share to all

You May Also Like

More From Author