ದಿನದಿಂದ ದಿನಕ್ಕೆ ಭರ್ಜರಿಯಾಗಿ ನಡೆಯುತ್ತಿದೆ. ಸಂವಿಧಾನ ಜಾಗ್ರತಿ ಜಾಥಾ.ಹುಬ್ಬಳ್ಳಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಜಾಗ್ರತಿ ರಥ.
ಹುಬ್ಬಳ್ಳಿ:-ಜಿಲ್ಲಾಡಳಿತ,ಜಿಲ್ಲಾ ಪಂಚಾಯತ್ ಹಾಗೂ ಸಮಾಜ ಕಲ್ಯಾಣ ಇಲಾಖೆ ಧಾರವಾಡ ಅವರ ವತಿಯಿಂದ ನಡೆಯುತ್ತಿರುವ ಸಂವಿಧಾನ ಜಾಗ್ರತಿ ಜಾಥಾ ಕಾರ್ಯಕ್ರಮ ದಿನದಿಂದ ದಿನಕ್ಕೆ ಜಾತ್ರೆಯ ಸ್ವರೂಪ ಪಡೆದುಕೊಳ್ಳುತ್ತಿದೆ.
ಇಂದು ಹುಬ್ಬಳ್ಳಿ ತಾಲೂಕಿನ ಬು.ಅರಳೀಕಟ್ಟಿ,ಅಗಡಿ ಗ್ರಾಮಗಳಲ್ಲಿ ಸಂವಿಧಾನ ಜಾಗೃತಿ ಜಾಥಾ ನಿಮಿತ್ತ ಟ್ರ್ಯಾಕ್ಟರ್, ಬೈಕ್ ರ್ಯಾಲಿ, ಸೈಕಲ್ ರ್ಯಾಲಿ , ಶಾಲಾ ವಿದ್ಯಾರ್ಥಿಗಳು ರ್ಯಾಲಿಗಳ ಮೂಲಕ ಸಂವಿಧಾನ ಜಾಗ್ರತಿ ಜಾಥಾವನ್ನು ಅದ್ದೂರಿಯಾಗಿ ಮೆರವಣಿಗೆ ಮಾಡಲಾಯಿತು.