ಅತ್ತೆ-ಅಳಿಯನ ಬರ್ತ್ ಡೇ ನಡೆಸಲು ಸಜ್ಜಾಗುತ್ತಿದೆ ಗಿರಣಿಚಾಳ ಮೈದಾನ: ಲೋಕಾ ಶಕ್ತಿ ಪ್ರದರ್ಶನ
ಹುಬ್ಬಳ್ಳಿ : ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹಾಗೂ ಹುಬ್ಬಳ್ಳಿ ಕಾಂಗ್ರೆಸ್ ಮುಖಂಡ ರಜತ್ ಉಳ್ಳಾಗಡ್ಡಿಮಠ ಒಂದೇ ವೇದಿಕೆಯಲ್ಲಿ ಇಂದು ಹುಟ್ಟು ಹಬ್ಬ ಆಚರಿಸಿಕೊಳ್ಳವ ಸಾದ್ಯತೆ ಇದೆ. ಇವರಿಬ್ಬರೂ ಒಂದೇ ಪಕ್ಷದಲ್ಲಿ ಇರುವುದರ ಜೊತೆಗೆ ಅಳಿಯ-ಅತ್ತೆಯ ಸಂಬಂಧ ಕೂಡ ಹೊಂದಿರುವುದು ವಿಶೇಷವಾಗಿದೆ.ಜೊತೆಗೆ ಇಬ್ಬರ ಹುಟ್ಟಿದ ದಿನ ಒಂದೇ ಆಗಿದ್ದು ಇನ್ನು ವಿಶೇಷ ಎನ್ನಿಸುತ್ತಿದೆ.
ಹುಬ್ಬಳ್ಳಿಯ ಗಿರಣಿಚಾಳ ಮೈದಾನದಲ್ಲಿ ಇಂದು ರಜತ್ ಸಂಭ್ರಮ ಕಾರ್ಯಕ್ರಮ ಜರಗಲಿದ್ದು,ವೈವಿಧ್ಯಮಯ ಕಾರ್ಯಕ್ರಮಗಳು ಕೂಡ ನಡೆಯಲಿವೆ ,ಚಿತ್ರ ನಟ ಡಾಲಿ ಧನಂಜಯ,ಹಾಸ್ಯ ಕಲಾವಿದ ಪ್ರಾಣೇಶ್ ಹಾಗೂ ತಂಡದ ಸದಸ್ಯರ ಹಾಸ್ಯ ಸಂಜೆ ಕಾರ್ಯಕ್ರಮ ಜೊತೆಗೆ ಮಠಾಧೀಶರ ಆಶೀರ್ವಚನ ಕೂಡ ನಡೆಯಲಿದೆ.
ಲೋಕಸಭೆ ಚುನಾವಣೆ ಹಿನ್ನಲೆಯಲ್ಲಿ ತಮ್ಮ ಹುಟ್ಟು ಹಬ್ಬದ ದಿನದಂದೇ ವಿವಿಧ ಮಠಾಧೀಶರ ಬೆಂಬಲ ಜೊತೆಗೆ ಶಕ್ತಿ ಪ್ರದರ್ಶನ ಕಾರ್ಯಕ್ರಮ ಎಂದೇ ರಜತ್ ಸಂಭ್ರಮ ಕಾರ್ಯಕ್ರಮವನ್ನು ಬಣ್ಣಿಸಲಾಗುತ್ತಿದ್ದು. ಈ ಕಾರ್ಯಕ್ರಮಕ್ಕೆ ಖುದ್ದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಆಗಮಿಸುತ್ತಿರುವ ರಜತ್ ಶಕ್ತಿಯನ್ನು ಮತ್ತಷ್ಟು ಇಮ್ಮಡಿ ಗೊಳಿಸುತ್ತಿದೆ.